ಮುಖ್ಯಪ್ರಾಣನ ಗುಟ್ಕಾ ಗಲಾಟೆ!

Posted on April 2, 2011

0


ಮಂಗಳೂರು: ಈಗ ಅತೀ ಹೆಚ್ಚು ಲಾಭ ತರುವ ವ್ಯಾಪಾರದಲ್ಲಿ ಗುಟ್ಕಾದ ಹೆಸರು ಮುಂಚೂಣಿ ಯಲ್ಲಿದೆ. ಆದರೆ ಲಾಭದ ಪ್ರಮಾಣ ಯಾವ ಹಂತಕ್ಕೆ ಮುಟ್ಟಿದೆ ಎಂದರೆ ಚಿಕ್ಕಪುಟ್ಟ ವ್ಯಾಪಾರಿಗಳು ಗುಟ್ಕಾ ಪಡೆ ಯಲು ಹೊಡೆದಾಟದ ಹಂತಕ್ಕೂ ತಲುಪಿದ್ದಾರೆ. ಗುಟ್ಕಾದ ಸಗಟು ವ್ಯಾಪಾರಿಗಳ ಅಂಗಡಿಯ ಎದುರು ಸಣ್ಣ ವ್ಯಾಪಾರಿಗಳ ಗಲಾಟೆ ನಿತ್ಯ ಎಂಬಂತೆ ನಡೆಯುತ್ತಿದೆ. ಗುಟ್ಕಾ ಖರೀದಿಗಾಗಿ ಸರಕು ವ್ಯಾಪಾ ರಿಗಳೊಂದಿಗೆ ವಾಗ್ವಾದ, ಪೊಲೀಸರ ಲಾಠಿಯ ರುಚಿ ನೋಡುವ ಹಂತದ ವರೆಗೂ ತಲುಪಿದ ಘಟನೆಯೊಂದು ಶುಕ್ರವಾರ ಬೆಳಗ್ಗೆ ಬಂದರಿನ ಕಸಾಯಿ ಗಲ್ಲಿಯಲ್ಲಿ ನಡೆಯಿತು.

ಮಂಗಳೂರು ನಗರಕ್ಕೆ ಮಾರುತಿ ಗುಟ್ಕಾ ಸರಬರಾಜು ಮಾಡುವ ಏಕೈಕ ಏಜೆಂಟರೆನಿಸಿರುವ ಮುಖ್ಯಪ್ರಾಣ ಎಂಟರ್‌ಪ್ರೈಸಸ್‌ನವರು ಕಳೆದ ಮೂರು ದಿನಗಳಿಂದ ಶುಭ ಕಾರ್ಯ ನಿಮಿತ್ತ ಅಂಗಡಿಗೆ ರಜೆ ಮಾಡಿದ್ದಾರೆ. ಆದರೂ ಪಕ್ಕದಲ್ಲಿಯೇ ಇರುವ ಮನೆಯಿಂದ ಆಯ್ದ ಗ್ರಾಹಕರಿಗೆ ಗುಟ್ಕಾ ನೀಡುತ್ತಿದ್ದಾರೆ.

ಇವರ ಈ ರೀತಿಯ ವ್ಯವಹಾರದಿಂದ ಗುಟ್ಕಾ ಎಲ್ಲರಿಗೂ ಸಿಗದಂತಾಗಿದೆ ಎಂದು ಆರೋಪಿಸಿದ ಸ್ಥಳೀಯ ವ್ಯಾಪಾರಿ ಗಳು ಶುಕ್ರವಾರ ಬೆಳಗ್ಗೆ ಇವರ ಮನೆಗೆ ಮುತ್ತಿಗೆ ಹಾಕಿದ್ದರು. ಸ್ಥಳೀಯರನ್ನು ಬಿಟ್ಟು ಕಾಸರಗೋಡು ಮತ್ತಿತರ ಕಡೆಯ ವ್ಯಾಪಾರಿಗಳಿಗೆ ಮೂರು ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಗುಟ್ಕಾ ಮಾರಲಾಗುತ್ತಿದೆ ಎಂಬುದು ಇವರ ಆರೋಪವಾಗಿತ್ತು. ನಮಗೂ ಗುಟ್ಕಾ ಕೊಡಿ ಎಂದು ಆಗ್ರಹಿಸುವ ವ್ಯಾಪಾರಿ ಗಳೊಂದಿಗೆ ಕೆಲವು ಪುಂಡರೂ ಸೇರಿಕೊಂಡಿದ್ದರಿಂದ ಗಲಾಟೆ ಗದ್ದಲ ಹೆಚ್ಚಾಗಿತ್ತು ಅಂತಿಮವಾಗಿ ಪೊಲೀ ಸರೇ ಮಧ್ಯ ಪ್ರವೇಶಿಸಿ ಕೆಲವ ರಿಗೆ ಲಾಠಿಯ ರುಚಿ ತೋರಿಸಿ ಚದುರಿಸಬೇಕಾಯಿತು.

ಈಗಲೂ ಪ್ಲಾಸ್ಟಿಕ್ ಸ್ಯಾಶೆಯ ಲ್ಲಿಯೇ ಮಾರಾಟವಾಗುತ್ತಿರುವ ಗುಟ್ಕಾ ಗಳ ಬೆಲೆ ಎರಡು ಮೂರು ಪಟ್ಟು ಹೆಚ್ಚಾಗಿದೆ. ಜನಸಾಮಾನ್ಯರ ಅತೀ ಬೇಡಿಕೆಯ ಗುಟ್ಕಾಗಳ ಪೈಕಿ ಮಾರುತಿ ಗುಟ್ಕಾ ಮೊದಲ ಸ್ಥಾನದಲ್ಲಿದ್ದರೆ, ಸ್ಟಾರ್ ಗುಟ್ಕಾ ಎರಡನೆ ಸ್ಥಾನದಲ್ಲಿದೆ. ಮಾರುತಿ ಈಗ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರಾಟ ವಾಗುವ ವಸ್ತುವಾಗಿದ್ದರೆ, ಸ್ಟಾರ್ ಗುಟ್ಕಾವನ್ನು ಮೂಲ ಬೆಲೆಗಿಂತ ಎರಡು ಪಟ್ಟು ಹೆಚ್ಚು ತೆತ್ತು ತೆಗೆದು ಕೊಳ್ಳಬೇಕಾಗಿದೆ.

ಸ್ಟಾರ್ ಗುಟ್ಕಾದ ಎಂಆರ್‌ಪಿ ದರ ೧.೫ರೂ. ಇದೆ. ಆದರೆ ವ್ಯಾಪಾರಸ್ಥರು ಅದನ್ನು ೩ರಿಂದ೩.೫ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬೇಕಿದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ವ್ಯಾಪಾರಿಗಳು ಗ್ರಾಹಕರ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಹತ್ತು, ಇಪ್ಪತ್ತು ಸ್ಯಾಶೆ ಒಮ್ಮೆಗೆ ತೆಗೆದು ಕೊಳ್ಳುತ್ತೇನೆ ಎಂದರೂ ವ್ಯಾಪಾರ ಸ್ಥರೂ ಹತ್ತು ಪೈಸೆಯಷ್ಟು ಬೆಲೆ ಇಳಿಸಲು ಸಿದ್ದರಾಗುವುದಿಲ್ಲ. ಇದಕ್ಕಾಗಿ ಕೆಲವು ಗ್ರಾಹಕರು ಅಂಗಡಿಗಳಲ್ಲಿ ರಂಪಾಟ ಮಾಡುವುದೂ ಇದೆ. ಹೋಲ್‌ಸೇಲ್ ವ್ಯಾಪಾರಸ್ಥರೇ ನಮಗೆ ೨.೫ರೂ.ಗೆ ಕೊಡುತ್ತಿದ್ದಾರೆ. ಹೀಗಿ ದ್ದಾಗ ನಾವು ಬೆಲೆ ಕಡಿಮೆ ಮಾಡು ವುದಾದರೂ ಹೇಗೆ ಎಂಬ ಪ್ರಶ್ನೆ ಸಣ್ಣ ವ್ಯಾಪಾರಿಗಳದ್ದು, ಬಹುತೇಕ ಗುಟ್ಕಾ ಪ್ರಿಯರು ಈಗ ಇದೇ ಬೆಲೆಗೆ ಹೊಂದಿ ಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಬೆಲೆ ಏರಿಕೆಗೆ ಪ್ರಮುಖ ಕಾರಣ ಸಗಟು ವ್ಯಾಪಾರಿಗಳು ತಮ್ಮಲ್ಲಿ ಸ್ಟಾಕ್ ಇದ್ದರೂ ಗುಟ್ಕಾವನ್ನು ಒಮ್ಮೆಗೆ ವಿತರಿಸದೆ ಲಾಭ ಮಾಡಿಕೊಳ್ಳುವ ಅವಕಾಶ ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಸಿಗುತ್ತದೆ ಯೋ ಇಲ್ಲವೋ ಎಂಬ ತರಾತುರಿಯ ಲ್ಲ್ಲೂ ಗುಟ್ಕಾವನ್ನು ಬಾಯಿಗೆ ತುರುಕಿಕೊ ಳ್ಳುವ ಅತ್ಯಾಸೆಯೂ ಕೂಡ ಗುಟ್ಕಾ ಬೆಲೆ ಹೆಚ್ಚಾಗಲು ಕಾರಣ.

Advertisements