ಮಹಿಳೆಯರಿಗೆ ಕಿರುಕುಳ: ಆರೋಪಿಗಳಿಗೆ ಪುಡಾರಿಗಳ ಕುಮ್ಮಕ್ಕು

Posted on April 2, 2011

0


ಬಂಟ್ವಾಳ: ಮಂಚಿ ಗ್ರಾಮದ ಕುಕ್ಕಾಜೆ, ಪುಚ್ಚಕೆರೆ ಎಂಬಲ್ಲಿ ಮನೆ ಯೊಂದರಲ್ಲಿ ವಾಸವಾಗಿರುವ ಮುಸ್ಲಿಂ ಮಹಿಳೆಯರ ಮೇಲೆ ಕ್ಷುಲ್ಲಕ ಅಪವಾದ ವೊಡ್ಡಿ, ಕಿರುಕುಳ ನೀಡಿದ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖ ಲಾಗಿದೆ. ಘಟನೆಗೆ ಸಂಬಂಧಿಸಿ ಸುಮಾರು ೧೫ ಜನರ ಮೇಲೆ ಪೊಲೀ ಸರು ಕೇಸು ದಾಖಲಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ನಡುವೆ ಪ್ರಕರಣ ದಾಖಲಾ ಗದಂತೆ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ಹಾಗೂ ಜಿಲ್ಲಾ ಪಂಚಾ ಯತ್‌ನ ಹಾಲಿ ಸದಸ್ಯರು ಸೇರಿ ಆರೋಪಿಗಳನ್ನು ರಕ್ಷಿಸಲು ಠಾಣೆಯ ಮೆಟ್ಟಿಲೇರಿದ್ದಾರೆ. ಪುಡಾರಿಗಳ ಕುಮ್ಮಕ್ಕಿಗೆ ಮಣೆ ಹಾಕದ ಪೊಲೀಸರು ಆರೋಪಿಗಳ ಮೇಲೆ ಕೇಸು ದಾಖಲಿ ಸಿದ್ದು, ಹುಡುಕಾಟದಲ್ಲಿ ತೊಡಗಿದ್ದಾರೆ. ವಿಟ್ಲ ನಿವಾಸಿ ಇಬ್ರಾಹಿಂ ಎನ್ನುವವರು ನೀಡಿದ ದೂರಿನನ್ವಯ ನಾಡಾಜೆ ಅಬ್ದುಲ್ ಮಜೀದ್, ಬದ್ರಿಯ ರಹೀಮ್, ದರ್ಬೆ ಟೈಲರ್ ಪುತ್ತು ಯಾನೆ ಮೊದಿನ್ ಕುಂಞ, ಅಬ್ಬಾಸ್ ದರ್ಬೆ, ಕುಕ್ಕಾಜೆ ವಾಸಿಗಳಾದ ಶಮೀವುಲ್ಲಾ, ಹನೀಫ್, ಪಾದೆ ಹಸೈನಾರ್, ಇಬ್ರಾಹಿಂ ಕುಕ್ಕಾಜೆ, ಹಮೀದ್ ಯಾನೆ ಚಿಟ್ಟೆ ಹಮೀದ್ ಎಂಬವರ ವಿರುದ್ಧ ಎಫ್‌ಐಆರ್ ದಾಖ ಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ತೆರಳಿದ ಆರೋಪಿಗಳ ಗುಂಪು ಮನೆಗೆ ಕಲ್ಲು ತೂರಾಟ ನಡೆಸಿದ್ದು, ಮಹಿಳೆಯರಿಗೆ ಅವಾಚ್ಯವಾಗಿ ಬೈದು ದಾಂಧಲೆ ನಡೆಸಿತ್ತು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಈಗ ಕಾರ್ಯಾಚರಿಸುತ್ತಿದ್ದಾರೆ. ಈ ಮಧ್ಯೆ ಆರೋಪಿಗಳ ರಕ್ಷಣೆಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಕೆಲವರು ಮುಂದಾಗಿದ್ದು, ಪೊಲೀಸ್ ಅಧಿಕಾರಿಗಳ ಹಿಂದೆ ಬಿದ್ದಿದ್ದಾರೆ. ರಾಜಕಾರಣಿಗಳ ಈ ಹೇಯ ಕೃತ್ಯ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

Advertisements
Posted in: Crime News