ಮರಳು ಸಾಗಾಟ ಬಂದ್

Posted on April 2, 2011

0


ಮಂಗಳೂರು: ರಾಜ್ಯ ಸರಕಾರ, ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸೂಚನೆ ಹಾಗೂ ನಿರ್ಣಯಗಳನ್ನು ಕಾಲಕಾಲಕ್ಕೆ ಅಳವಡಿಸಿ ಕೊಂಡು ಸಹಕರಿಸಿಕೊಂಡು ಹೋಗುತ್ತಿ ದ್ದರೂ ಸರಕಾರ ಹಾಗೂ ಜಿಲ್ಲಾಡಳಿತ ಮರಳು ಗಾರಿಕೆಯಲ್ಲಿ ನಿರತರಾಗಿರುವ ಲಾರಿ ಮಾಲಕರಿಗೆ, ಮರಳು ಗುತ್ತಿಗೆದಾರರು, ಹೊಯ್ಗೆ ದೋಣಿ ಕಾರ್ಮಿಕರು ಮತ್ತು ಮಾಲಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದಿರುವ ಮರಳು ಗುತ್ತಿಗೆದಾರರು ಹಾಗೂ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲಕರ ಜಂಟಿ ಕ್ರಿಯಾ ಸಮಿತಿಯು ಮರಳು ಸಾಗಾಟವನ್ನು ನಾಳೆಯಿಂದ ಅನಿರ್ದಿಷ್ಟಾವಧಿ ಬಂದ್ ಮಾಡುವುದಾಗಿ ತಿಳಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದಿರುವ ಸಮಿತಿಯ ಪದಾಧಿಕಾರಿಗಳು ಸರಕಾರ ಕರಾವಳಿ ಜಿಲ್ಲೆಗಳಿಗೆ ಮರಳು ಗಣಿಗಾರಿಕೆಯ ಕುರಿತು ನೀಡಿರುವ ವಿಶೇಷ ರಿಯಾಯಿತಿ ಕುರಿತು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮಿತಿ ಮತ್ತು ವಿನಾಯಿತಿಗಳನ್ನೊಳಗೊಂಡ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ. ಕರಾವಳಿ ನಿಯಂತ್ರಣ ವಲಯ-೨೦೧೦ರ ಅಧಿಸೂಚನೆ ಯನ್ನು ಜಾರಿಗೊಳಿಸಲು ಮೂರು ತಿಂಗಳ ಕಾಲಾವಕಾಶ ಮುಕ್ತಾಯವಾಗಿದ್ದು, ಸರಕಾರಕ್ಕೆ ಮಾಡಿರುವ ಮನವಿಗೆ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ ಇದಕ್ಕೆ ನೇರ ಜಿಲ್ಲಾಡಳಿತವೇ ಹೊಣೆ ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ರಾಜರತ್ನ ಸನಿಲ್, ಹರೀಶ್ ಶೆಟ್ಟಿಬೈಲ್, ಹಲಿಯಾರ್ ಇಕ್ಬಾಲ್, ಬಿ.ಎಸ್ ಚಂದ್ರು ಹಾಜರಿದ್ದರು.

Advertisements