ಪುತ್ತೂರು: ಜೀಪ್ ಕಳವು

Posted on April 2, 2011

0


ಮಂಗಳೂರು: ನಿಲ್ಲಿಸಲಾಗಿದ್ದ ಜೀಪ್ ಒಂದು ಕಳವಾಗಿರುವ ಘಟನೆ ಪುತ್ತೂರಿನ ಭವನೇಂದ್ರ ಹಾಲ್ ಬಳಿ ನಡೆದಿದೆ. ಬಡಗನ್ನೂರಿನ ಅಮೃತೇಶ್ ಆಚಾರ್ಯ ಎಂಬವರು ಜೀಪ್ ಪಾರ್ಕ್ ಮಾಡಿ ಕೆಲಸದ ನಿಮಿತ್ತ ನಗರದ ಕಡೆಗೆ ಬಂದಿದ್ದರು. ಆದರೆ ಮರಳಿ ಬಂದು ನೋಡುವಾಗ ಜೀಪು ಕಾಣೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕಳವಾದ ಜೀಪಿನ ಮೌಲ್ಯ ೧.೭೦ ಲಕ್ಷ ಎಂದು ಅಂದಾಜಿಸಲಾಗಿದೆ. ಪುತ್ತೂರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಕಾಸರಗೋಡು: ಬೈಕ್‌ಗೆ ಬೆಂಕಿ: ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ನಾಶಗೈದ ಘಟನೆ ಕಾಸರಗೋಡಿನ ಚೌಕಿ ಆಜಾದ್ ನಗರದಲ್ಲಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಶಾವುಲ್ ಹಮೀದ್ ಎಂಬಬರು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಶುಕ್ರವಾರ ಬೆಳಗಿನ ಜಾವ ಎರಡು ಘಂಟೆಗೆ ಬೆಂಕಿ ಹಚ್ಚಲಾ ಗಿತ್ತು. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಡಾನೆ ದಾಳಿ: ಕಾಡಾನೆ ಯೊಂದು ತೋಟಕ್ಕೆ ದಾಳಿ ನಡೆಸಿ ಅಪಾರ ಪ್ರಾಮಾ ಣದ ನಷ್ಟ ಉಂಟಾದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಸಂಭವಿಸಿದೆ. ಕಾಡಾನೆ ೧೦ ತೆಂಗಿನ ಗಿಡ, ೭೫ ಅಡಕೆ ಗಿಡ, ೪೦ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದ್ದು ಇದರಿಂದ ೩೫ಸಾವಿರ ರೂ. ಹೆಚ್ಚು ವಷ್ಟ ಉಂಟಾಗಿದೆ ಎಂದು ತೋಟದ ಮಾಲಕ ಪುರ ಭವಾನಿಶಂಕರ್ ಎಂಬವರು ತಿಳಿಸಿದ್ದಾರೆ.

Advertisements
Posted in: Crime News