ನನ್ನನ್ನು ಮತ್ತೆ ಫೀಲ್ಡ್‌ಗಿಳಿಯುವಂತೆ ಮಾಡದಿ ರಿ: ಪೊಲೀಸರ ವಿರುದ್ಧ ಹರಿಹಾಯ್ದ ಬರ್ಕೆ ಯದ್ದು

Posted on April 2, 2011

0


ಮಂಗಳೂರು: ನನ್ನನ್ನು ವಿನಾಕಾರಣ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ನಾನು ಒಂದು ಕಾಲದಲ್ಲಿ ರೌಡಿಯಾಗಿದ್ದೆ ನಿಜ. ಆದರೆ ನನ್ನನ್ನು ರೌಡಿ ಯನ್ನಾಗಿ ಮಾಡಿದ್ದು ಇದೇ ಸಮಾಜ ಹಾಗೂ ಭ್ರಷ್ಟ ಪೊಲೀಸ್ ಇಲಾಖೆ. ನಾನು ಕಳೆದ ೧೩ ವರ್ಷಗಳ ಹಿಂದೆ ಎಲ್ಲವನ್ನೂ ತ್ಯಜಿಸಿ ಹೊಸ ಜೀವನ ಆರಂಭ ಮಾಡಿದ್ದರೆ, ಪೊಲೀಸ್ ಇಲಾಖೆ ಮತ್ತೆ ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಹಿಂದಿನ ಲೋಕಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದೆ ಎಂದು ಮಾಜಿ ರೌಡಿ ಯಜ್ಞೇಶ್ವರ ಅಲಿಯಾಸ್ ಬರ್ಕೆ ಯದ್ದು ಪತ್ರಿಕೆಯಲ್ಲಿ ಅಲವತ್ತುಕೊಂಡಿದ್ದಾರೆ.

ಜಿಲ್ಲೆಯಲ್ಲಿರುವ ಪೊಲೀಸ್ ಅಧಿಕಾರಿ ಗಳ ವರ್ತನೆಯಿಂದ ನಾನು ಮಾನಸಿಕವಾಗಿ ಘಾಸಿಗೊಂಡಿದ್ದೇನೆ ಎಂದಿರುವ ಯದ್ದು, ನಾವು ಹೋಟೆಲ್‌ನಲ್ಲಿ ಖಾಸಗಿ ಪಾರ್ಟಿ ಮಾಡುತ್ತಿರುವ ವೇಳೆಯೂ ಪೊಲೀಸರು ದಾಳಿ ನಡೆಸಿ ನಮ್ಮನ್ನು ಬಂಧಿಸಿ ನಮ್ಮಲ್ಲಿದ್ದ ಹಣವನ್ನು ಕೊಳ್ಳೆ ಹೊಡೆಯುತ್ತಾರೆ ಎಂದಾ ದರೆ ಇದಕ್ಕೆ ಅರ್ಥವಿದೆಯೇ? ಕೆಲವು ದಿನಗಳ ಹಿಂದೆ ನಗರದ ಹೊಟೇಲ್‌ನಲ್ಲಿ ಗೆಳೆಯರ ಜತೆ ಇದ್ದುದನ್ನೇ ಎಸಿಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಬಂಧಿಸಿ ನಮ್ಮ ಬಳಿ ಇದ್ದ ಅಂದಾಜು ೧೦ ಲಕ್ಷ ರೂ.ಯನ್ನು ವಶಪಡಿಸಿತ್ತು. ಪತ್ರಿಕೆಗಳಲ್ಲಿ ದೊಡ್ಡದಾಗಿ ಮಿಂಚಿದ್ದ ಪೊಲೀಸ್ ಅಧಿಕಾರಿ ನ್ಯಾಯಾ ಲಯಕ್ಕೆ ಎರಡು ಲಕ್ಷ ಹಣ ಪತ್ತೆ ಎಂದು ವರದಿ ನೀಡಿದೆ. ಹಾಗಾದರೆ ಉಳಿದ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸುವ ಯದ್ದು, ಪೊಲೀಸ್ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಇಲ್ಲಿ ಬೆಂಗಳೂರಿನಲ್ಲಿ ನಡೆ ಯುತ್ತಿರುವಂತೆ ಡ್ರಗ್ಸ್, ಅಕ್ರಮ ದಂಧೆ ನಡೆ ಯುತ್ತಿಲ್ಲ. ಇಲ್ಲಿ ಬೆಟ್ಟಿಂಗ್, ಜುಗಾರಿ ನಡೆಸಲೇ ಬಾರದು ಎಂದಲ್ಲಿ ಜಿಲ್ಲೆಯ ನಾನಾ ಮೂಲೆಗಳಲ್ಲಿರುವ ಕ್ಲಬ್‌ಗಳ ಬಾಗಿಲು ಮುಚ್ಚಿಸಲಿ, ಪೊಲೀಸ್ ಇಲಾಖೆ ಕ್ಲಬ್ ಮಾಲಕರಿಂದ ಹಣ ಪಡೆದು ದಂಧೆ ನಡೆಸಲು ಅವಕಾಶ ನೀಡುವುದೇಕೆ, ಇದು ಭ್ರಷ್ಟಾಚಾರವಲ್ಲವೇ? ಎಂದು ಆರೋಪಿಸುತ್ತಾರೆ.

ಕೆಲವು ದಿನಗಳ ಭಾರತ-ಪಾಕ್ ಪಂದ್ಯಾಟದ ವೇಳೆ ಉಳ್ಳಾಲದ ಯುವಕನ ಜತೆ ಮಾತಾಡಿದ್ದನ್ನೇ ಬಂದರು ಪೊಲೀಸರು ನನ್ನನ್ನು ಉಳ್ಳಾಲ ಠಾಣೆಗೆ ಕರೆದೊಯ್ದು ೪೨೦ ಕೇಸ್ ಹಾಕಿ, ಖಳನಾಯಕನಂತೆ ಬಿಂಬಿಸಿದ್ದಾರೆ. ಆ ದಿನ ನಾನು ಯಾವುದೇ ಬೆಟ್ಟಿಂಗ್ ಜಾಲದಲ್ಲಿ ಪಾಲು ಪಡೆದಿರಲಿಲ್ಲ. ನನ್ನನ್ನು ಸುಮ್ಮನೆ ಬೆಟ್ಟಿಂಗ್‌ಕೋರನನ್ನಾಗಿ ಪೊಲೀಸರು ಬಿಂಬಿಸಿದರು ಎಂದು ಪೊಲೀಸರ ಮೇಲಿನ ಅಸಮಾಧಾನವನ್ನು ಬಹಿರಂಗವಾಗಿ ಹೊರಗೆಡವಿದ್ದಾರೆ ಬರ್ಕೆ ಯದ್ದು. ಜಯಂತ್ ಶೆಟ್ಟಿ, ಅಶೋಕನ್‌ರಂತಹ ಅಧಿಕಾರಿಗಳ ಮಾತಿಗೆ ಶರಣಾಗಿ ನಾನು ರೌಡಿಯಿಸಂ ಫೀಲ್ಡ್ ಬಿಟ್ಟು ಬಿಟ್ಟಿದ್ದೇನೆ. ಈಗಿನ ಅಧಿಕಾರಿಗಳು ಇದೇ ರೀತಿ ವರ್ತನೆ ಮುಂದುವರಿಸಿದರೆ ನಾನು ಮತ್ತೆ ಫೀಲ್ಡ್‌ಗಿಳಿಯುವುದು ಅನಿವಾರ್ಯ ಎಂದಿರುವ ಯದ್ದು, ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬಂದು ಲಾಭ ಪಡೆಯುವ ರಾಜಕೀಯ ನಾಯಕರು ಅನ್ಯಾಯವಾಗುತ್ತಿದ್ದರೆ ಏಕೆ ಮಾತಾಡುತ್ತಿಲ್ಲ? ಎಂದು ಮಾತಿಗೆ ವಿರಾಮ ಹಾಕಿದರು ಬರ್ಕೆ ಯದ್ದು.

Advertisements
Posted in: Crime News