ಜಿಮ್‌ನಲ್ಲಿ ರಾಸಲೀಲೆ: ವಿದೇಶಕ್ಕೆ ಹಾರಿದ ಆರೋಪ ಿ

Posted on April 2, 2011

0


ಬಂಟ್ವಾಳ: ಬಿ.ಸಿ.ರೋಡ್ ಜಂಕ್ಷನ್ ಬಳಿಯ ಖಾಸಗಿ ವಾಣಿಜ್ಯ ಸಂಕೀರ್ಣ ವೊಂದರಲ್ಲಿ ಕಾರ್ಯಾಚರಿಸುತ್ತಿರುವ ಜಿಮ್ನೇಶಿಯಂ ಸೆಂಟರ್‌ನ ರಾಸಲೀಲೆ ದೃಶ್ಯಗಳನ್ನು ಚಿತ್ರೀಕರಿಸಿ ಮೊಬೈಲ್‌ಗಳಿಗೆ ರವಾಣಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಯೋರ್ವ ವಿದೇಶಕ್ಕೆ ಹಾರಿದ್ದು, ಪ್ರಕರಣವನ್ನು ದಾಖಲಿಸಿದ್ದ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಿ.ಸಿ.ರೋಡ್‌ನ ಕಾಂಪ್ಲೆಕ್ಸ್‌ವೊಂದರಲ್ಲಿ ಕೆಲವು ವರ್ಷಗಳ ಹಿಂದೆ ಆರಂಭಗೊಂಡ ಜಿಮ್ಮೇಶಿಯಂ ಸೆಂಟರ್‌ನ ಕೊಠಡಿಗೆ ದೇಹ ದಾರ್ಢ್ಯ ಪಟು ಒಬ್ಬ ಡಿಸೆಂಬರ್ ತಿಂಗ ಳೊಂದು ದಿನ ಹಾಡುಹಗಲೇ ತನ್ನ ಪ್ರೇಯಸಿ ಯನ್ನು ಕರೆಯಿಸಿ ರಾಸಲೀಲೆಯಲ್ಲಿ ತೊಡ ಗಿದ್ದು, ಇದನ್ನು ಸೆಂಟರ್‌ನ ಪಾಲುದಾರ ಹಾಗೂ ಮತ್ತಿಬ್ಬರು ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿದ್ದರೆನ್ನಲಾಗಿದೆ. ಇದನ್ನು ಬ್ಲೂಟೂಥ್ ಮೂಲಕ ಇತರರ ಮೊಬೈಲ್‌ಗೆ ರವಾನಿಸುತ್ತಿದ್ದರು. ಅಲ್ಲದೇ ರಾಸಲೀಲೆಯಲ್ಲಿ ತೊಡಗಿದ್ದವರಿಗೆ ಬೆದರಿಕೆಯೂ ಹಾಕುತ್ತಿದ್ದರೆ ನ್ನಲಾಗಿದೆ.

ಈ ಕೃತ್ಯಕ್ಕೂ ಮೊದಲು ದೇಹದಾಢ್ಯ ಪಟು ಹಾಗೂ ಆತನ ಪ್ರೇಯಸಿ ಯಾರಿಗೂ ಸಂಶಯ ಬಾರದಂತೆ ದೇಹ ದಂಡನೆಗೊಳಿಸಿ ತೆರಳುತ್ತಿದ್ದರು. ಇದರ ಹಿಂದೆ ಬೇಹುಗಾರಿಕೆ ನಡೆಸಿದ್ದ ಸೆಂಟರ್‌ನ ಪಾಲುದಾರ ಹಾಗೂ ಇತರರು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಪೂರ್ವಯೋಜಿತವಾಗಿ ಯೋಜನೆ ರೂಪಿಸಿದ್ದು, ಅವರಿಬ್ಬರಿಗೆ ಸಂಶಯ ಬಾರದಂತೆ ಕೊಠಡಿಯೊಳಗೆ ಕ್ಯಾಮರಾ ಅಳವಡಿಸಿದ್ದರು. ಮೊಬೈಲ್‌ಗಳಲ್ಲಿ ರಾಸಲೀಲೆಯ ದೃಶ್ಯಗಳು ರವಾನೆಯಾಗುತ್ತಿದ್ದಂತೆಯೇ ಸುದ್ದಿ ಪೊಲೀಸರ ಕಿವಿಗೆ ಬಿತ್ತು. ಅವರು ವಿಚಾರಣೆ ಆರಂಭಿಸಿದ್ದರು. ಚಿತ್ರೀಕರಣ ನಡೆಸಿದ ಆರೋಪದಲ್ಲಿ ಕೊಳಕೆ ನಿವಾಸಿ ಲ್ಯಾನ್ಸಿ ಹಾಗೂ ವಿಟ್ಲ ಮಂಗಿಲಪದವು ನಿವಾಸಿ ಸುನಿಲ್ ಎಂಬವರನ್ನು ಬಂಧಿಸಿದ್ದರು. ಈ ನಡುವೆ ಪ್ರಮುಖ ಆರೋಪಿ ಬೋಳಂಗಡಿ ನಿವಾಸಿ ನವೀನ್ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜಾಮೀನು ಪಡೆದು ಬಿಡಲಾಗಿದೆ. ರಾಸಲೀಲೆಯಲ್ಲಿ ತೊಡಗಿದ್ದ ಯುವಕ-ಯುವತಿಯನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಎಚ್ಚರಿಕೆ ನೀಡಿದ್ದರು.

Advertisements
Posted in: Crime News