ಕುತೂಹಲಕ್ಕೆ ಕಾರಣವಾಗಿರುವ ಕಳ್ಳತನ

Posted on April 2, 2011

0


ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ನಗರದಲ್ಲಿ ಮೊನ್ನೆ ರಾತ್ರಿ ಭಾರೀ ಕಳ್ಳತನ ನಡೆದಿದ್ದು, ಇದು ನಡೆಯುವ ವೇಳೆ ಮನೆಯಲ್ಲಿ ಸಾಕಷ್ಟು ಜನ ಇದ್ದರೂ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ.

ಮೊನ್ನೆ ಕೆ.ಸಿ.ನಗರದ ಇಬ್ರಾಹಿಂ ಎಂಬವರ ತಮ್ಮನ ಮದುವೆ ಸಮಾ ರಂಭ ನಡೆದಿತ್ತು. ಸಮಾರಂಭ ಮುಗಿದ ಬಳಿಕ ರಾತ್ರಿ ಕುಟುಂಬದ ಸುಮಾರು ೨೦ರಷ್ಟು ಮಂದಿ ಇಬ್ರಾಹಿಂ ಅವರ ಮನೆಯಲ್ಲಿ ತಂಗಿದ್ದರು. ಆದರೆ ಅದೇ ದಿನ ರಾತ್ರಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೋಣೆ ಯಲ್ಲಿದ್ದ ಕಪಾಟಿನ ಬೀಗ ಮುರಿದು ಸುಮಾರು ಒಂಬತ್ತು ಲಕ್ಷ ಮೌಲ್ಯದ ೬೦ ಪವನ್ ಬಂಗಾರ ಮತ್ತು ಐದು ಸಾವಿರ ಹಣವನ್ನೂ ಎಗರಿಸಿದ್ದಾರೆ.

ಕಳ್ಳತನ ನಡೆದ ಕೋಣೆಯಲ್ಲ್ಲಿ ಗಂಡಸರು ಮಲಗಿದ್ದರೂ ಕಳ್ಳತನ ಕೃತ್ಯ ನಡೆದಿರುವುದು ಅವರ ಗಮನಕ್ಕೆ ಬಂದಿ ರಲಿಲ್ಲ. ಇದನ್ನು ಗಮನಿಸಿದಾಗ ಕಳ್ಳರು ಅಮಲು ಭರಿಸುವ ವಸ್ತುವನ್ನು ಬಳಸಿ ಕೃತ್ಯ ನಡೆಸಿದರೇ ಅಥವಾ ಮನೆಯ ಲ್ಲಿದ್ದವರೇ ಕೃತ್ಯ ನಡೆಸಿದರೇ ಎನ್ನುವ ಸಂಶಯವೂ ಕಾಡುವಂತಾಗಿದೆ. ಅಲ್ಲದೆ ಇಬ್ರಾಹಿಂ ಅವರ ತಮ್ಮನ ಮದುವೆಯ ದಿನವೇ ಭಾರೀ ಕಳ್ಳತನ ನಡೆದಿದ್ದು ಇಂತಹ ದಿನದಲ್ಲಿ ಕೃತ್ಯ ನಡೆಸಲು ಕಳ್ಳರಿಗೆ ಧೈರ್ಯ ಬರುವುದಾದರೂ ಹೇಗೆ ಎನ್ನುವ ಕುತೂ ಹಲ ಭರಿತ ಪ್ರಶ್ನೆಯೂ ಸಾರ್ವಜನಿಕ ರನ್ನು ಕಾಡತೊಡಗಿದೆ.

Advertisements
Posted in: Crime News