ಎಸ್‌ಡಿಪಿಐನಿಂದ ರಾಷ್ಟ್ರೀಯ ಅಭಿಯಾನ

Posted on April 2, 2011

0


ಮಂಗಳೂರು: ಅಮಾಯಕರು ಜೈಲಿನಲ್ಲಿ, ಅಪರಾಧಿಗಳು ಪ್ರಭುತ್ವದಲ್ಲಿ ಈ ಧ್ಯೇಯ ವಾಕ್ಯದಡಿಯಲ್ಲಿ ಎಸ್‌ಡಿ ಪಿಐ ಪಕ್ಷದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಅಭಿಯಾನದ ಅಂಗವಾಗಿ ನಿನ್ನೆ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಸಾರ್ವಜನಿಕ ಸಭೆ ನಡೆಯಿತು.

ಸಭೆಗೆ ಮುನ್ನ ಕಾರ್ಯಕರ್ತರು ಕ್ಲಾಕ್‌ಟವರ್‌ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿದರು. ಬಳಿಕ ನಡೆದ ಸಾರ್ವ ಜನಿಕ ಸಭೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ಭಯೋತ್ಪಾದನೆ, ಕೋಮುವಾದ ಮತ್ತು ಭ್ರಷ್ಟಾಚಾರ ದೇಶದ ಅತೀ ದೊಡ್ಡ ಶತ್ರುವಾಗಿದೆ. ಆದರೆ ಕಳೆದ ಏಳು ವರ್ಷಗಳಲ್ಲಿ ದೇಶಾ ದ್ಯಂತ ನಡೆದಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಘಪರಿವಾರ ನಡೆಸಿದ್ದರೂ ಅದರ ಮುಖಂಡರನ್ನು ಬಂಧಿಸಿ ಜೈಲಿಗೆ ತಳ್ಳುವ ಬದಲು ಅಮಾಯಕ ಮುಸ್ಲಿಂ ಯುವಕರನ್ನು ಜೈಲಿಗಟ್ಟಲಾಗಿದೆ. ಇದರಿಂದಾಗಿ ಭಯೋತ್ಪಾದನಾ ಚಟುವಟಿಕೆಗಳು ಇನ್ನಷ್ಟು ಹೆಚ್ಚಾಗಲಿದೆ. ಸಂಘಪರಿವಾರದ ಮುಖಂಡರನ್ನು ಬಂಧಿಸಿದರೆ ತಮ್ಮ ಸರಕಾರ ಉರುಳಲಿದೆ ಎನ್ನುವ ಭಯ ಕೇಂದ್ರ ಸರಕಾರವನ್ನು ಕಾಡುತ್ತಿದೆ. ಇದರಿಂದಾಗಿ ನೈಜ ಆರೋಪಿಗಳನ್ನು ಬಂಧಿಸುವ ತಾಕತ್ತು ಸರಕಾರಕ್ಕಿಲ್ಲದಂ ತಾಗಿದೆ ಎಂದು ಇಲ್ಯಾಸ್ ಕಿಡಿ ಕಾರಿದರು.

ಹರ್ಷದ್ ಮೆಹ್ತಾ ೪೦೦ ಕೋಟಿ ಯ ಹಗರಣ ನಡೆಸಿದಾಗ ದೇಶದ ಜನತೆ ನಿಬ್ಬೆರಗಾಗಿದ್ದರು. ನಂತರ ಬೋಫೋರ್ಸ್ ಹಗರಣ ನಡೆದಿದ್ದು ಅದು ಮೆಹ್ತಾ ಹಗರಣವನ್ನು ಮೀರಿ ಸಿತ್ತು. ಇದೀಗ ರಾಜಾ ಅವರು ಸಾವಿ ರಾರು ಕೋಟಿ ರೂ. ಹಗರಣದಲ್ಲಿ ಶಾಮೀಲಾಗಿದ್ದಾರೆ. ಇದನ್ನು ಗಮನಿಸಿ ದಾಗ ಇಂದು ದೇಶದಲ್ಲಿ ನಡೆಯುತ್ತಿ ರುವ ಹಗರಣಗಳು ಸಾವಿರ ಕೋಟಿ ರೂ. ಗಳನ್ನು ಮೀರಿದೆ. ಹೀಗೆಯೇ ಮುಂದುವರಿದರೆ ದೇಶ ಉದ್ಧಾರ ವಾಗಲು ಸಾಧ್ಯವಿಲ್ಲ. ಇದರ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಜಾಗೃತಿ ಅಭಿಯಾನ ಹಮ್ಮಿ ಕೊಳ್ಳಲಾಗಿದೆ ಎಂದು ಇಲ್ಯಾಸ್ ತಿಳಿಸಿ ದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಎ.ಜ ಲೀಲ್, ಅತಿಥಿಗಳಾದ ನಿರ್ವಾ ಣಪ್ಪ, ಲ್ಯಾನ್ಸಿ ತೌರಾಸ್, ಡೀಕಯ್ಯ, ಮ.ಶ ರೀಫ್, ಶಾಹುಲ್ ಹಮೀದ್, ಅನ್ವರ್ ಸಾದಾತ್ ಮತ್ತಿತರರು ಉಪಸ್ಥಿತರಿದ್ದರು.

Advertisements