ಎಸ್‌ಎಂಎಸ್ ವಂಚನಾ ಜಾಲ: ನೈಜೀರಿಯಾ ಪ್ರಜೆಯ ಬಂಧ ನ

Posted on April 2, 2011

0


ಕಾರ್ಕಳ: ಸಾವಿರ ಡಾಲರ್ ರೂ. ಗೆಲುವು ಸಾಧಿಸಿದ್ದೀರಿ. ಬಹುಮಾನ ಪಡೆ ಯಲು ನಗದು ಕಳುಹಿಸಿರಿ ಎಂದೆಲ್ಲಾ ಎಸ್‌ಎಂಎಸ್ ಕಳಿಸಿ ವಂಚಿಸುತ್ತಿದ್ದ ನೈಜೀ ರಿಯಾ ಮೂಲದ ಭಾರೀ ಜಾಲವೊಂದನ್ನು ಭೇದಿಸಿದ ಕಾರ್ಕಳ ನಗರ ಕ್ರೈಂ ವಿಭಾಗದ ಎಸ್.ಐ ರವಿ ನೇತೃತ್ವದ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋ ಪಿಯನ್ನು ಮಣಿಪಾಲದಲ್ಲಿ ಬಂಧಿಸಿದೆ.

ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸು ತ್ತಿರುವ ನೈಜಿರಿಯಾ ದೇಶದ ಪ್ರಜೆಯಾಗಿರುವ ಚಾರ್ಲ್ಸ್ ಮೈಕೆಲ್ ಎಂಬಾತ ಪ್ರಕರಣದ ಆರೋ ಪಿಯಾಗಿದ್ದಾನೆ. ನೂಜಿರಿಯಾ ಮೂಲದ ಕೆಲವರು ಭಾರತದ ಪ್ರಮುಖ ನಗರಗಳಲ್ಲಿ ನೆಲೆಸಿ ಇಂಟರ್‌ನೆಟ್ ಮೂಲಕ ವಿವಿಧ ಕಂಪೆನಿಗಳ ಮೊಬೈಲ್ ಗ್ರಾಹಕರಿಗೆ ಹಣದ ಅಮಿಷವೊಡ್ಡಿ ಲಕ್ಷಾಂತರ ರೂಪಾಯಿ ವ್ಯವಸ್ಥಿತ ರೀತಿಯಲ್ಲಿ ಸುಲಿಗೆ ಮಾಡುತ್ತಿದ್ದರು. ಕಳೆದ ವರ್ಷ ಸಪ್ಪೆಂಬರ್ ತಿಂಗಳಿನಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ದಾದಿ ಯಶೋಧ ಎಂಬವರ ಮೊಬೈಲ್‌ಗೆ ಎಸ್‌ಎಂಎಸ್ ಕರೆ ಯೊಂದು ಬಂದಿತ್ತು. ನಿಮ್ಮ ಅದೃಷ್ಟ ಖುಲಾಯಿಸಿದೆ. ಡಾಲರ್ ರೂ.ಬಹು ಮಾನ ಪಡೆಯಲು ಇಂತಿಷ್ಟು ಹಣ ಕಟ್ಟಿ, ಆನಂತರ ಡ್ರಾ ಮಾಡಿ ಎಂದು ವಂಚಿಸಲಾಗಿತ್ತು. ಯಶೋಧಾ ವಂಚನಾ ಜಾಲಕ್ಕೆ ನಾಲ್ಕುವರೆ ಲಕ್ಷ ರೂಪಾಯಿ ಕಳಿಸಿದ್ದಾರೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಕಂಡುಬಾರದೇ ಕಂಗಾಲಾದ ಅವರು ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಇದೇ ತಂಡ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಜೀವನ್‌ಭೀಮಾ ಠಾಣಾ ಪೊಲೀಸರ ಕಾರ್ಯಚರಣೆ ವೇಳೆಗೆ ಸಿಕ್ಕುಬಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಆರೋಪಿಗಳ ತಂಡ ಮಣಿಪಾಲದಲ್ಲಿ ಬೀಡುಬಿಟ್ಟು ಹಲವು ಅಮಾಯಕರನ್ನು ಬಕ್ರಾ ಮಾಡುವಲ್ಲಿ ನಿರತವಾಗಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

Advertisements
Posted in: Crime News