ಉದ್ಯೋಗ ಮಾಡಿಕೊಡುವುದಾಗಿ ನಂಬಿಸಿ ಮಹಿಳೆಗೆ ವಂಚ ನೆ ಇಬ್ಬರ ವಿರುದ್ಧ ದೂರು

Posted on April 2, 2011

0


ಪುತ್ತೂರು: ಪುತ್ತೂರು ಮೆಸ್ಕಾಂನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕುಂಬ್ರದ ಮಹಿಳೆಯೊಬ್ಬರಿಗೆ ಕೆಲಸ ಖಾಯಂ ಮಾಡಿ ಕೊಡುವುದಾಗಿ ನಂಬಿಸಿ ರೂ. ೧.೮೫ ಲಕ್ಷ ಪಡೆದು ಇಬ್ಬರು ವ್ಯಕ್ತಿಗಳು ವಂಚಿಸಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶಾಂತವನ ನಿವಾಸಿ ಅನಿತಾ ವಂಚನೆಗೊಳಗಾದ ಮಹಿಳೆ. ಸುಳ್ಯದ ಅಶೋಕ್ ಹಾಗೂ ಬೆಳ್ತಂಗ ಡಿಯ ವೇಣುಗೋಪಾಲ್ ಎಂಬವರು ಸೇರಿಕೊಂಡು ಉದ್ಯೋಗ ಖಾಯ ಮಾತಿಗೊಳಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದಾಗಿ ಅವರು ಆರೋಪಿಸಿದ್ದಾರೆ.

ಉದ್ಯೋಗ ಖಾಯಮಾತಿ ಗೊ ಳಿಸಿ ಕೊಡುವುದಾಗಿ ನಂಬಿಸಿ ತನ್ನಿಂದ ರೂ. ೧.೮೫ ಲಕ್ಷವನ್ನು ಸುಳ್ಯದ ಅಶೋಕ್ ಎಂಬವರು ಪಡೆದು ಕೊಂಡು ಈ ಸಂಬಂಧ ತನಗೆ ಚೆಕ್ ನೀಡಿದ್ದರು. ಅರೋಪಿಗಳು ಉದ್ಯೋಗ ಖಾಯಂ ಗೊಳಿಸದ ಹಿನ್ನೆಲೆಯಲ್ಲಿ ಚೆಕ್ ನಗದೀಕರಿಸಲು ಹೋದ ವೇಳೆ ಅದು ಅಮಾನ್ಯಗೊಂಡಿತ್ತು. ಈ ಚೆಕ್ ಬೆಳ್ತಂಗಡಿಯ ವೇಣುಗೋಪಾಲ್ ಎಂಬವರಿಗೆ ಸೇರಿದ್ದಾಗಿದೆ ಎಂದು ಅವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಲ್ಲಿ ತಿಳಿಸಿದ್ದರು.

ಇದೀಗ ನ್ಯಾಯಾಲಯದ ಆದೇಶ ದಂತೆ ಇಬ್ಬರು ಆರೋಪಿಗಳ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisements
Posted in: Crime News