ಉಚ್ಚಿಲ: ಕಿಡಿಗೇಡಿಗಳಿಂದ ಬ್ಯಾನರ್ ನಾಶ

Posted on April 2, 2011

0


ಪಡುಬಿದ್ರಿ: ಉಚ್ಚಿಲ ಪೇಟೆಯಲ್ಲಿ ಉರೂಸ್ ಸಂಬಂಧಿತ ಹಾಗೂ ಸಂಘದ ವಾರ್ಷಿಕೋತ್ಸವಕ್ಕೆ ಸಂಬಂಧಪಟ್ಟ ಎರಡು ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ಸಂಭವಿಸಿದೆ. ಈ ಬಗ್ಗೆ ಪಡು ಬಿದ್ರಿ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಲಾಗಿದೆ.

ಕೆಲ ದಿನಗಳ ಹಿಂದೆ ಉಚ್ಚಿಲ ಪೇಟೆಯಲ್ಲಿ ಮುಸ್ಲಿಂ ಧಾರ್ಮಿಕ ಪಂಡಿತರ ಪ್ರವಚನದ ಬಗ್ಗೆ ಶುಭಾ ಶಯ ಕೋರುವ ಬೃಹತ್ ಕಟೌಟೊಂ ದನ್ನು ಆಳವಡಿಸಿದ್ದರು. ಇದೇ ಸಮಯ ಶಿರ್ವಾದ ಸಂಘವೊಂದರ ವಾರ್ಷಿ ಕೋತ್ಸವದ ಕಟೌಟನ್ನು ಪೇಟೆಯ ಹೃದಯ ಭಾಗದಲ್ಲಿರುವ ಅಶ್ವಥ ಮರದ ಕೆಳಗೆ ಅಳವಡಿಸಲಾಗಿತ್ತು.

ಗುರುವಾರ ರಾತ್ರಿ ೧೦-೩೦ರವರೆಗೆ ಕಟೌಟುಗಳು ಸುಸ್ಥಿತಿಯಲ್ಲಿದ್ದುದ್ದನ್ನು ಸ್ಥಳೀಯರು ಕಂಡಿದ್ದು ಶುಕ್ರವಾರ ಬೆಳಗ್ಗಿನ ಜಾವ ಧಾರ್ಮಿಕ ಪ್ರವಚನದ ಬಗ್ಗೆ ಶುಭಾಶಯ ಕೋರುವ ಕಟೌ ಟನ್ನು ಕಿಡಿಗೇಡಿಗಳು ಹರಿದು ಹಾಕಿದ್ದು ಕಂಡು ಬಂದಿದೆ. ಅಂತೆಯೇ ವಾರ್ಷಿ ಕೋತ್ಸವದ ಕಟೌಟನ್ನು ಅದಕ್ಕೆ ಅಳವಡಿಸಿದ ರೀಪಿನಿಂದ ಕೊಂಡೊ ಯ್ದಿದ್ದಾರೆ. ಉಚ್ಚಿಲ ಪರಿಸರದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಉಂಟಾಗಿತ್ತಾದರೂ, ಎರಡೂ ಕೋಮುಗಳಿಗೆ ಸಂಬಂಧಿಸಿದ ಕಟೌ ಟುಗಳನ್ನು ಕಿಡಿಗೇಡಿಗಳು ಹರಿದು ಹಾಕಿ ದ್ದರಿಂದ ಪರಿಸ್ಥಿತಿ ಶಾಂತ ವಾಗಿತ್ತು. ಈ ಸಂದರ್ಭ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಸಂದರ್ಭ ಪರವಾನಿಗೆ ರಹಿತ ಬ್ಯಾನರ್ ಹಾಗೂ ಕಟೌಟುಗಳನ್ನು ಹಾಕುವವರಿಗೆ ಗ್ರಾ. ಪಂ. ದಂಡ ವಿಧಿಸುವಂತೆ ಆದೇ ಶಿಸಿದೆ.

Advertisements
Posted in: Crime News