ಹೊಸ್ಮಾರು: ಬಿರುಗಾಳಿಗೆ ಮನೆ ಜಖಂ

Posted on April 1, 2011

0


ಮಂಗಳೂರು: ಬಜಗೊಳಿ ಸಮೀಪದ ಹೊಸ್ಮಾರು ಬಳಿ ನಿನ್ನೆ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ತಾ.ಪಂ. ಮಾಜಿ ಸದಸ್ಯೆ ವಾರಿಜಾಕ್ಷಿ ಸುವರ್ಣ ಅವರ ಮನೆಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಮನೆ ಜಖಂಗೊಂಡು ಅಪಾರ ಹಾನಿ ಸಂಭವಿಸಿದೆ.

ಬಿರುಗಾಳಿಗೆ ಮರವು ರಭಸದಿಂದ ಮನೆಯ ಮಾಡಿನ ಮೇಲೆ ಬಿದ್ದ ಪರಿಣಾಮ ಮನೆಯ ಮಾಡು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುಮಾರು ೧.೫ ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Posted in: Crime News