ಶ್ರೇಷ್ಟ ಇನ್ನಿಂಗ್ಸ್ ಅಲ್ಲ: ಗಾವಸ್ಕರ್

Posted on April 1, 2011

0


ಮುಂಬಯಿ: ಸೆಮಿಫೈನಲ್ ನಲ್ಲಿ ಸಚಿನ್ ತೆಂಡುಲ್ಕರ್ ಆಡಿದ ಆಟ ಆತನ ಶ್ರೇಷ್ಟ ಇನ್ನಿಂಗ್ಸ್ ಅಲ್ಲದಿದ್ದರೂ ತಂಡವನ್ನು ಜಯಿ ಸುವಲ್ಲಿ ಪ್ರಮಖ ಪಾತ್ರ ವಹಿಸಿದೆ ಎಂದು ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಪ್ರತಿಕ್ರಿಯಿ ಸಿದ್ದಾರೆ.

ಬಹುಷಃ ಇದು ಸಚಿನ್‌ರ ಉತ್ತಮ ಆಟವಾಗಿರಲಿಕ್ಕಿಲ್ಲ. ಆದರೆ ಆತ ತನ್ನ ವಿಕೆಟ್ ಅನ್ನು ಕೈಚೆಲ್ಲದೆ ತಂಡಕ್ಕೆ ಉಪ ಯುಕ್ತವಾಗಿ ಆಡಿದರು. ಮುಖ್ಯವಾಗಿ ಆರಂಭಿಕ ಜೋಡಿ ಭಾರತಕ್ಕೆ ಸ್ಫೋಟಕ ಆರಂಭ ನೀಡಿದ್ದು ಕೂಡ ತಂಡ ಜಯ ಸಾಧಿಸಲು ಪ್ರಮುಖ ಕಾರಣವಾಯಿತು. ಸ್ಪಿನ್ನರ್ ಅಶ್ವಿನ್‌ರನ್ನು ತಂಡದಿಂದ ಹೊರಗಿಟ್ಟದ್ದು ಅಪಾಯ ಕಾರಿ ಯಾದ ನಿರ್ಧಾರವಾಗಿತ್ತು. ಆದರೆ ನೆಹ್ರಾ ತನಗೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿ ಕೊಂಡರು ಎಂದು ಗಾವಸ್ಕರ್ ತಿಳಿಸಿದರು.

Posted in: Sports News