ವಂಚಕರ ಬಂಧನ

Posted on April 1, 2011

0


ಕಾರ್ಕಳ: ನಗರದ ಅನಂತಶಯನ ದೇವಳ ಬಳಿಯಲ್ಲಿರುವ ಮಣಪ್ಪುರಂ ಫೈನಾನ್ಸ್‌ಗೆ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಆರೋಪಿಗಳಿಬ್ಬರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಾರಾವಿಯ ಭರತ್‌ಕುಮಾರ್ ಜೈನ್ ಮತ್ತು ಬಂಟ್ವಾಳ ಮಂಗಲಪ್ಪಾದೆಯ ವಾದಿ ರಾಜ ಆಚಾರ್ಯ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಒಂದನೇ ಆರೋಪಿ ನಕಲಿ ಚಿನ್ನದ ರಿಂಗ್‌ಗಳನ್ನು ಫೈನಾನ್ಸ್‌ಗೆ ಅಡವಿಟ್ಟು ೨೦೧೦ ಸಪ್ಪೆಂಬರ್ ೧ರಂದು ೪೦,೦೦೦ರೂ. ಪಡೆದಿದ್ದನು. ಇವನ ಕೃತ್ಯಕ್ಕೆ ಪರೋ ಕ್ಷವಾಗಿ ಸಹಕರಿಸಿದವನು ಬಂಟ್ವಾಳ ಮಂಗಲಪ್ಪಾದೆಯ ವಾದಿರಾಜ್ ಆಚಾರ್ಯ ಎಂಬಾತ. ಈತ ಕಬ್ಬಿಣದ ರಿಂಗ್‌ಗೆ ಚಿನ್ನದ ಹೊದಿಕೆ ಹಾಕಿಕೊಡುವುದರಲ್ಲಿ ನಿಸ್ಸೀಮನಾಗಿದ್ದು, ರಿಂದೊಂದಕ್ಕೆ ೬,೦೦೦ ರೂ. ಪಡೆದುಕೊಳ್ಳುತ್ತಿದ್ದನೆಂದು ಪೊಲೀಸರ ತನಿಖೆ ಮೂಲಗಳಿಂದ ತಿಳಿದುಬಂದಿದೆ.

ಭರತ್‌ಕುಮಾರ್ ಜೈನ್ ರಿಂಗ್‌ಗಳನ್ನು ಪಡೆದು ಫೈನಾನ್ಸ್‌ನಲ್ಲಿ ಅಡವಿಟ್ಟಿದನು. ಕೆಲ ದಿನಗಳ ಹಿಂದೆಯಷ್ಟೇ ಫೈನಾನ್ಸ್‌ನ ಸಿಬ್ಬಂದಿ ಗಮನಕ್ಕೆ ಈ ಅಂಶ ಬೆಳಕಿಗೆ ಬಂದಿತ್ತು. ಬಳಿಕ ಅಲ್ಲಿನ ಸಿಬ್ಬಂದಿ ನಗರ ಠಾಣೆಗೆ ದೂರು ಸಲ್ಲಿಸಿದ್ದರು.

Posted in: Crime News