ಮೊದಲ ಪತ್ನಿಗೆ ಹಿಂಸೆ; ಪತಿಗೆ ಜೀವ ಬೆದರಿಕೆ

Posted on April 1, 2011

0


ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಗುತ್ತು ಎಂಬಲ್ಲಿ ಮಹಿಳೆಗೆ ಆಕೆಯ ಪತಿ ಮತ್ತು ಪತಿಯ ಎರಡನೇ ಪತ್ನಿ ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಬನ್ನೂರು ಗ್ರಾಮದ ಬನ್ನೂರು ಗುತ್ತು ನಿವಾಸಿ ಜೀನತ್ (೨೮) ಹಲ್ಲೆಗೊಳಗಾದ ಮಹಿಳೆ. ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೀನತ್ ಅವರ ಪತಿ ಮಹಮ್ಮದ್ ಅಶ್ರಫ್, ಪತಿಯ ಎರಡನೇ ಪತ್ನಿ ಬಿ ಝೀನತ್, ಝೀನತ್‌ಳ ತಂದೆ ಖಾದರ್ ಸಾಹೇಬ್, ತಾಯಿ ಜೊಹರಾ ಮತ್ತು ಝೀನತ್‌ಳ ಸಹೋದರ ರಹೀಂ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ಆರೋಪಿಗಳು ಸೇರಿಕೊಂಡು ದೊಣ್ಣೆ ಯಿಂದ ಮತ್ತು ಕೈಯಿಂದ ಹೊಡೆದು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ , ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ಪಿರ‍್ಯಾದಿದಾರರಾದ ಜೀನತ್ ಅವರು ಆರೋಪಿಸಿದ್ದಾರೆ.

ಜೀನತ್ ಅವರನ್ನು ಮಹಮ್ಮದ್ ಅಶ್ರಫ್ ೧೦ವರ್ಷಗಳ ಹಿಂದೆ ವಿವಾಹ ವಾಗಿದ್ದರು, ಆ ಬಳಿಕ ಬಿ.ಝೀನತ್ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದ ಮಹಮ್ಮದ್ ಅಶ್ರಫ್ ಮೊದಲ ಪತ್ನಿಯಾದ ಜೀನತ್‌ಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Posted in: Crime News