ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ: ಇ ಂಜಿನಿಯರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು

Posted on April 1, 2011

0


ಮಂಗಳೂರು: ಪುರಭವನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಅವರ ಪ್ರತಿಮೆ ಕಾಮ ಗಾರಿಯ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಜಿಲ್ಲಾಧಿ ಕಾರಿಗೆ ದೂರು ನೀಡಿದ್ದಾರೆ.

ಮಂಗಳೂರು ಪುರಭವನದ ಎದುರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕಾಮಗಾರಿಯ ಗುತ್ತಿಗೆಯನ್ನು ೨೦೦೮ ರಲ್ಲಿಯೇ ಪುಷ್ಪರಾಜ್ ಶೆಟ್ಟಿ ಎನ್ನುವವರಿಗೆ ನೀಡಲಾಗಿತ್ತು. ಇದೀಗ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯ ಬಗ್ಗೆ ಕೋಡಿಕಲ್ಲಿನ ದಯಾನಂದ ಎಂಬವರು ಮಾಹಿತಿ ಹಕ್ಕು ಅಧಿನಿಯಮದ ಅಡಿ ಯಲ್ಲಿ ಮಾಹಿತಿ ಕೇಳಿದ್ದರು. ಕಾಮ ಗಾರಿಯ ಉಸ್ತುವಾರಿಯನ್ನು ಪಾಲಿಕೆ ವಹಿಸಿಕೊಳ್ಳದೆ ಸಾಧಾರಣ ಗುತ್ತಿಗೆದಾ ರರಿಗೆ ನೀಡಿರುವುದು ಗಮನಕ್ಕೆ ಬಂದಿದ್ದು ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಎಂದು ದಯಾನಂದ್ ಜಿಲ್ಲಾಧಿಕಾರಿಗೆ ನೀಡಿ ರುವ ದೂರಿನಲ್ಲಿ ತಿಳಿಸಿದ್ದಾರೆ.

ಏಳುವರೆ ಅಡಿ ಉದ್ದದ ಪ್ರತಿಮೆ ಯನ್ನು ನಾಲ್ಕು ಲಕ್ಷದೊಳಗೆ ಮಾಡಲು ಸಾಧ್ಯವೆಂದು ಅನುಭವಿಗಳು ತಿಳಿಸಿ ದ್ದರೂ, ದಲಿತ ಸಂಘಟನೆಯೊಂದರ ಜೊತೆ ಶಾಮೀಲಾದ ಪಾಲಿಕೆ ಕಾರ್ಯ ಪಾಲಕ ಇಂಜಿನಿಯರ್, ಪುಷ್ಪರಾಜ್ ಶೆಟ್ಟಿ ಅವರಿಗೆ ಗುತ್ತಿಗೆ ನೀಡಿದ್ದಾರೆ. ಅಂಬೇಡ್ಕರ್ ಅವರು ಕೇವಲ ದಲಿತ ರಿಗೆ ನಾಯಕರಾಗಿರದೆ ನೊಂದವರ ಧ್ವನಿಯಾಗಿದ್ದರು. ಆದರೂ ಪಾಲಿಕೆ ಯಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿ ರಿಸಲಾಗಿರುವ ೨೨ ಶೇಖಡಾ ಅನು ದಾನದಲ್ಲಿ ಪ್ರತಿಮೆಗೆ ಹಣ ಬಿಡುಗ ಡೆಗೊಳಿ ಸಲಾಗಿದ್ದು ಇದು ಕೂಡಾ ಅಂಬೇಡ್ಕರ್ ಅವರಿಗೆ ಮಾಡಿ ರುವ ಅವಮಾನವಾಗಿದೆ. ಕಾಮಗಾರಿ ಯಲ್ಲಿ ನಡೆದಿರುವ ಅವ್ಯವ ಹಾರದ ತನಿಖೆ ನಡೆಸುವಂತೆ ಜಿಲ್ಲಾಧಿ ಕಾರಿಗೆ ದಯಾನಂದ ಅವರು ವಿನಂತಿ ಸಿದ್ದಾರೆ.

Posted in: Crime News