ಒತ್ತಡವನ್ನು ನಿಭಾಯಿಸಿದೆವು: ಧೋನಿ

Posted on April 1, 2011

0


ಮುಂಬಯಿ: ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಒತ್ತಡವನ್ನು ಸಮರ್ಥವಾಗಿ ನಿಭಾ ಯಿಸಿ ಜಯ ಸಾಧಿಸಲು ಸಫಲವಾ ಗಿದ್ದು ಇದು ನಮಗೆ ಮುಂದಿನ ಫೈನಲ್ ಪಂದ್ಯಕ್ಕೆ ನೆರವಾಗಲಿದೆ ಎಂದು ಟೀಮ್ ಇಂಡಿಯಾ ಕಪ್ತಾನ ಧೋನಿ ತಿಳಿಸಿದ್ದಾರೆ.

ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದನ್ನು ಪಾಕ್ ಪಂದ್ಯ ಸರಿಯಾಗಿ ಕಲಿಸಿಕೊಟ್ಟಿದ್ದು ಮುಖ್ಯ ವಾಗಿ ಯುವ ಆಟಗಾರರು ಇದ ರಿಂದ ಬಹಳಷ್ಟು ಕಲಿತಿದ್ದಾರೆ. ನಾವು ಇಂತಹ ಕೆಲವು ಸನಿಹ ಪಂದ್ಯಗಳನ್ನು ಎದುರಿಸಿದ್ದು ಮುಂದಿನ ಯಾವುದೇ ಒತ್ತಡ ಪಂದ್ಯಗಳಲ್ಲಿ ನೆರವಿಗೆ ಬರಲಿದೆ. ವಿಕೆಟನ್ನು ತಪ್ಪಾಗಿ ಅರ್ಥೈಸಿಕೊಂಡಿ ದ್ದರಿಂದ ಮೂವರು ವೇಗಿಗಳು ಹಾಗೂ ಕೇವಲ ಒಬ್ಬ ಸ್ಪಿನ್ನರ್ ಅನ್ನು ಆಡಿಸು ವಂತಾಯಿತು. ಕೊಹ್ಲಿ ಹಾಗೂ ಯುವ ರಾಜ್ ಬೇಗನೇ ಕ್ರೀಸ್‌ನಿಂದ ನಿರ್ಗ ಮಿಸಿದ್ದು ರನ್ ಬರ ಎದುರಿಸು ವಂತಾ ಯಿತು. ಪಾಕ್ ಬೌಲರ್‌ಗಳು ಉತ್ತಮ ವಾಗಿ ಆಡಿದರೂ ನಮ್ಮ ತಂಡದ ಸಾಂಘಿಕ ಪ್ರದರ್ಶನ ನೆರವಿಗೆ ಬಂದಿತು ಎಂದು ಧೋನಿ ತಿಳಿಸಿದರು.

Posted in: Sports News