ಎ.೪: ‘ಶ್ರೀ ಗಣಪತಿ ಪೀಠ ಮತ್ತು ಸಭಾಭವನ’ ಶಿಲಾನ್ಯ ಾಸ

Posted on April 1, 2011

0


ಮಂಗಳೂರು: ತಾಲೂಕಿನ ಪಡು ಬೊಂಡಂತಿಲ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಪಡು ಬೊಂಡಂತಿಲದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳಲಿ ರುವ ‘ಶ್ರೀ ಗಣಪತಿ ಪೀಠ ಮತ್ತು ಸಭಾಭವನ’ದ ಶಿಲಾನ್ಯಾಸ ಸಮಾರಂಭ ಎಪ್ರಿಲ್ ೪ರಂದು ನೆರವೇರಲಿದೆ.

ಬೆಳಿಗ್ಗೆ ೮ ಗಂಟೆಗೆ ಗಣಹೋಮ, ೧೦ಕ್ಕೆ ಶಿಲಾನ್ಯಾಸ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜಲಕ್ಷ್ಮಿ ಟ್ರಾನ್ಸ್ಸ್‌ಪೋರ್ಟ್‌ನ ಮಾಲಕ ಬಿ.ಚಿತ್ತರಂಜನ್ ರೈ ಶಿಲಾನ್ಯಾಸ ನೆರವೇರಿಸುವರು. ಕರಾವಳಿ ಕಾಲೇಜು ಅಧ್ಯಕ್ಷ ಗಣೇಶ್ ರಾವ್ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಅಧ್ಯಕ್ಷತೆ ವಹಿಸುವರು. ಉದ್ಯಮಿ ಪ್ರಕಾಶ್ ಶೇರಿಗಾರ್ ಕಟ್ಟಡದ ನಕ್ಷೆ ಬಿಡುಗಡೆ ಗೊಳಿಸುವರು. ಉದ್ಯಮಿ ಗಿರಿಧರ ಶೆಟ್ಟಿ ಕೈಪಿಡಿ ಬಿಡುಗಡೆ ಮಾಡುವರು. ಜ್ಯೋತಿಷಿ-ವಾಸುತಿಶಾಸ್ತ್ರಜ್ಞ ಬೈಂದೂರು ಪೊದುವಾಳ್, ಮೋಹನದಾಸ ಶೆಟ್ಟಿ , ಸದಾನಂದ ಪೂಜಾರಿ, ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ಸಂಪತ್ ಕುಮಾರ್, ನವೀನ ಆಳ್ವ, ಊರಿನ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Posted in: Crime News