‘ಕಂಬಳ ಬುಕ್-೧’ ಅಂತರ್ಜಾಲ ಆವೃತ್ತಿ ಬಿಡುಗಡೆ

Posted on April 1, 2011

0


ಮಂಗಳೂರು: ಶೇಖರ ಅಜೆಕಾರು ಅವರ ‘ಕಂಬಳ ಬುಕ್-೧’ ಇದರ ಅಂತರ್ಜಾಲ ಆವೃತ್ತಿಯನ್ನು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ಜೀವಂಧರ ಬಲ್ಲಾಳ್ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ತಿತಿತಿ.ಚಿರಿeಞಚಿಡಿ.ಛಿo.ಛಿಛಿಯಲ್ಲಿ ಈ ಪುಸ್ತಕ ಲಭ್ಯವಾಗುತ್ತದೆ. ೨೦೦೯-೧೦ನೇ ಸಾಲಿನಲ್ಲಿ ೧೪೮ ಮಂದಿ ಕಂಬಳ ಸಂಬಂಧಿ ಜನರನ್ನು ಸಂದರ್ಶಿಸಿ ಅವರ ಮೂಲಕ ಮಾಹಿತಿ ಪಡೆದು ಕಂಬಳ ಬುಕ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜೀವಿತ ಶ್ರೇಷ್ಠ ಕಂಬಳ, ಗೌರವ ಬಾರಾಡಿ ಕಂಬಳ, ವರ್ಷದ ಶ್ರೇಷ್ಠ ಕಂಬಳ (ಪ್ರ) ಮೂಡಬಿದಿರೆ ಕಂಬಳ, ದ್ವಿ-ಮಿಯಾರು ಕಂಬಳ, ತೃ-ಪುತ್ತೂರು ಕಂಬಳ, ಸಮಾಧಾನಕರ, ಬಾರಾಡಿ ಬೀಡು ಮತ್ತು ಪಿಲಿಕುಲ, ಕಂಬಳ ಯುವ ಸಾಧಕ ಚಂದ್ರಹಾಸ ಸಾಧು ಸನಿಲ್ ಅವರಿಗೆ ಲಭಿಸಿದೆ ಎಂದು ತಿಳಿಸಿದರು.

ಲೇಖಕ ಬೋಳ ಚಿತ್ತರಂಜನ್ ಶೆಟ್ಟಿ, ಹೇಮಚಾರ್ಯ ಅವರು ಸುದ್ದಿಗೋಷ್ಟಿಯಲ್ಲಿ ಇದ್ದರು.

Advertisements