ಹೆರಿಗೆ ರಕ್ತಸ್ರಾವ: ಗೃಹಿಣಿ ಮೃತ್ಯು

Posted on April 1, 2011

0


ಪುತ್ತೂರು: ಪುತ್ತೂರು ತಾಲ್ಲೂಕಿನ ಮುಂಡೂರು ಗ್ರಾಮದ ಕೊರಂಗು ಎಂಬಲ್ಲಿನ ಗೃಹಿಣಿಯೊಬ್ಬರು ಹೆರಿಗೆಯ ಬಳಿಕ ರಕ್ತ ಸ್ರಾವವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.

ಮುಂಡೂರು ಗ್ರಾಮದ ಕೊರಂಗು ನಿವಾಸಿ ಗಣೇಶ್ ಬಂಗೇರ ಅವರ ಪತ್ನಿ ಶ್ವೇತಾ (೨೮) ಮೃತ ಪಟ್ಟ ಮಹಿಳೆ.

ಶ್ವೇತಾ ಅವರನ್ನು ಎರಡನೇ ಹೆರಿಗೆಗಾಗಿ ಪುತ್ತೂರಿನ ನಿಸರ್ಗ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಬುಧವಾರ ಮಧ್ಯಾಹ್ನ ಸಾಮಾನ್ಯ ಹೆರಿಗೆಯೊಂದಿಗೆ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ಕೆಲ ಹೊತ್ತಿನ ಬಳಿಕ ರಕ್ತಸ್ರಾವ ಕ್ಕೊಳಗಾದ ಅವರಿಗೆ ರಕ್ತ ನೀಡಲಾಗಿತ್ತು. ಆದರೂ ರಕ್ತಸ್ರಾವ ನಿಲ್ಲದ ಹಿನ್ನಲೆಯಲ್ಲಿ ವೈದ್ಯರ ಸಲಹೆಯಂತೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸ ಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ತಿಳಿದು ಬಂದಿದೆ. ಕಾಸರಗೋಡಿನ ಬಾಯಾರು ದೂಮಣ್ಣ ಪೂಜಾರಿ ಎಂಬವರ ಪುತ್ರಿಯಾದ ಶ್ವೇತಾ ಅವರನ್ನು ಗಣೇಶ್ ಬಂಗೇರ ಎಂಟು ವರ್ಷಗಳ ಹಿಂದೆ ವಿವಾಹ ವಾಗಿದ್ದರು.

Advertisements
Posted in: Crime News