ಯುವ ಕಾಂಗ್ರೆಸ್‌ಗೆ ಸದಸ್ಯತ್ವ ಅಭಿಯಾನ

Posted on April 1, 2011

0


ಮಂಗಳೂರು:ದ.ಕ. ಜಿಲ್ಲೆಯಲ್ಲಿ ಭಾರತೀಯ ಯುವ ಕಾಂಗ್ರೆಸ್‌ಗೆ ಒಂದು ಲಕ್ಷ ಸದಸ್ಯರನ್ನು ಸೇರಿಸಿ ಕೊಳ್ಳುವ ಗುರಿ ಹೊಂದಲಾಗಿದೆ ಎಂದು ಪಕ್ಷದ ಚುನಾವಣಾಧಿಕಾರಿ ಅಬೂಶರ್ಮಾ ತಿಳಿಸಿದ್ದಾರೆ.

ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸದಸ್ಯತ್ವ ನೋಂದಣಿ ಅಭಿಯಾನ ಮಾ.೨೮ರಂದು ಆರಂಭಗೊಂ ಡಿದ್ದು, ಎ.೨೫ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು. ಸದಸ್ಯತ್ವ ಅಭಿಯಾನ ಪೂರ್ಣಗೊಂಡ ಬಳಿಕ ಯುವ ಕಾಂಗ್ರೆಸ್‌ನ ಪಾದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆ ನಡೆಸ ಲಾಗುವುದು. ಬೂತ್‌ಮಟ್ಟದಿಂದ ವಿಧಾನಸಭಾ, ಲೋಕಸಭಾ ಕ್ಷೇತ್ರ ಹಾಗೂ ರಾಜ್ಯಮಟ್ಟದಲ್ಲಿ ಪದಾಧಿ ಕಾರಿಗಳ ಆಯ್ಕೆ ಮಾಡಲಾಗುವುದು ಎಂದವರು ಹೇಳಿದರು.

ಸಂಘಟನೆಯ ಆಂತರಿಕ ಚುನಾವಣೆ ಸ್ವತಂತ್ರ ಹಾಗೂ ಮುಕ್ತವಾಗಿ ನಡೆಯಲಿದೆ. ಮೂಲಭೂತವಾದಿಗಳು ಹಾಗೂ ಕ್ರಿಮಿನಲ್ ಹಿನ್ನೆಲೆಯವರಿಗೆ ಸದಸ್ಯತ್ವ ನೀಡಲಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದರು. ಸುದ್ದಿ ಗೋಷ್ಠಿಯಲ್ಲಿ ಪಕ್ಷದ ಮುಖಂಡ ರಾದ ಶಶಿಧರ ಹೆಗ್ಡೆ, ಅರುಣ್ ಕುವೆಲ್ಲೊ, ನಜೀರ್ ಹಾಜರಿದ್ದರು.

Advertisements