ಯುವತಿ ನಾಪತ್ತೆ

Posted on April 1, 2011

0


ಮಂಗಳೂರು: ಫ್ಯಾಷನ್ ಡಿಸೈನ್ ಕ್ಲಾಸಿಗೆ ಹೋಗುವುದೆಂದು ತಿಳಿಸಿದ ಯುವತಿ ಕಾಣಿಯಾದ ಬಗ್ಗೆ ಉಡುಪಿ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಕಟಪಾಡಿ ಕೋಟೆ ಗ್ರಾಮದ ನಿವಾಸಿ ಗಾಯತ್ರಿ ಎಂಬವರ ಪುತ್ರಿ ವಿಜೇತ (೨೦) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಫ್ಯಾಷನ್ ಡಿಸೈನ್ ಕ್ಲಾಸಿಗೆಂದು ಹೋಗುವುದಾಗಿ ತಿಳಿಸಿದರಾದೂ ಈ ತನಕ ಮನೆಗೆ ಮನೆಗೆ ಬಂದಿಲ್ಲವಾಗಿದ್ದು ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ನೀಡಲಾಗಿದೆ.

ಜೂಜುಕೋರರ ಸೆರೆ: ನಗರದ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ದಾಳಿ ನಡೆಸಿದ ಬಂದರು ಪೊಲೀಸರು ಆರು ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಬಂಧಿತರನ್ನು ಚಂದ್ರಕಿರಣ್, ಸಚಿನ್ ಬಿ, ವಿಜಯ, ಹರೀಶ್ ಸಾಲಿಯಾನ್, ಹೇಮಂತ್ ಕುಮಾರ್, ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಂದ ೬,೭೦೦ ರೂ. ನಗದು ಹಣ ಮತ್ತಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisements
Posted in: Crime News