ಯಡ್ಡಿ ಜಾಗದಲ್ಲಿ ಅನಂತ್‌ರನ್ನು ಗಣಿಧಣಿಗಳ ಕನಸ ು

Posted on April 1, 2011

0


ಬೆಂಗಳೂರು:ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಅವರನ್ನು ಮುಖ್ಯಮಂತ್ರಿ ಗಾದಿಗೆ ತರಲು ಬಳ್ಳಾರಿ ಗಣಿರೆಡ್ಡಿ ಸಚಿವರು ಮುಂದಾಗಿದ್ದಾರೆ.

ತಮ್ಮ ರಾಜಕೀಯದ ಆಸರೆಯಾಗಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಎ.೧೦ರಂದು ರೆಡ್ಡಿಗಳು ನಡೆಸುವ ಕಾರ್ಯಾಚರಣೆ ಯಶಸ್ವಿಯಾದರೆ ಅನಂತ್‌ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಯತ್ನ ನಡೆದಿದೆ.

ಇದಕ್ಕಾಗಿ ರೆಡ್ಡಿಗಳು ಗುಪ್ತವಾಗಿ ಕಾರ್ಯಾಚರಣೆ ನಡೆಸಿದ್ದು, ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ. ಯಡಿಯೂರಪ್ಪ ಅವರಿಂದ ಯಾವುದೇ ಲಾಭ ಪಡೆಯದೇ ದೂರ ಇರುವ ಶಾಸಕರನ್ನು ರೆಡ್ಡಿಗಳು ತಮ್ಮೆಡೆಗೆ ಸೆಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅಂಕಿ ಅಂಶಗಳಿಗಿಂತ ಈ ಸರಕಾರ ಹೋದರೂ ಸರಿ. ಯಡಿಯೂರಪ್ಪ ಮಾತ್ರ ಅಧಿಕಾರದಲ್ಲಿ ಮುಂದುವರಿಯಬಾರದೆಂಬ ಕಠಿಣ ನಿಲುವಿಗೆ ಬಂದಿದ್ದಾರೆ. ಈ ಉದ್ದೇಶದಿಂದಲೇ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಯಾವ ತೆರನಾದ ರಾಜಕೀಯವನ್ನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisements
Posted in: National News