ಯಡ್ಡಿಯನ್ನು ಕೆಳಗಿಳಿಸಲು ರೆಡ್ಡಿಗಳ ನಿರ್ಧಾರ

Posted on April 1, 2011

0


ಬೆಂಗಳೂರು: ಸ್ವಜನಪಕ್ಷಪಾತ, ಭ್ರಷ್ಟಾಚಾರದ ಆರೋಪ ಹೊತ್ತ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂ ರಪ್ಪ ಅವರನ್ನು ಕೆಳಗಿಳಿಸಲು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಮುಖಂಡರು ಮಾಡಲಾಗದ ಕೆಲಸ ವನ್ನು ಬಳ್ಳಾರಿ ಗಣಿ ರೆಡ್ಡಿ ಸಚಿವರು ಮಾಡಲು ಮುಂದಾಗಿದ್ದಾರೆ.

ಉಪಚುನಾವಣೆ ಮುಗಿಯು ತ್ತಿದ್ದಂತೆ ಏಪ್ರಿಲ್ ಹತ್ತರಂದೇ ಯಡಿ ಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಗಡುವು ನೀಡಿರುವ ರೆಡ್ಡಿಗಳು, ಅತ್ತಕಡೆ ಗಮನಹರಿಸಿ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ನಮ್ಮ ಬಲದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ತಾವು ಬಲಿಷ್ಠಗೊಳ್ಳುತ್ತಿದಂತೆ ನಮ್ಮನ್ನು ರಾಜಕೀಯವಾಗಿ ಮುಗಿಸುವ ಸಂಚು ಮಾಡಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಮ್ಮ ವ್ಯವಹಾರದ ಮೇಲೆ ಗಧಾಪ್ರಹಾರ ನಡೆಸಿರುವ ಮುಖ್ಯ ಮಂತ್ರಿ ತಮ್ಮ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ಕಾರಣರಾಗಿದ್ದಾರೆ. ಇಷ್ಟೇ ಅಲ್ಲದೆ ತಮ್ಮನ್ನು ಬೆಂಬಲಿಸಿದ ಇತರೆ ಗಣಿ ಉದ್ದಿಮೆದಾರರ ಮೇಲೂ ಮುಖ್ಯ ಮಂತ್ರಿಯವರು ಗಧಾಪ್ರಹಾರ ಮಾಡು ತ್ತಿರುವುದಲ್ಲದೆ ನಮ್ಮನ್ನು ಹೊಡೆದು ಆಳುವ ನೀತಿ ಅನು ಸರಿಸುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ತಮ್ಮ ಬೆಂಬಲಿತ ೧೫ ಗಣಿ ಗುತ್ತಿಗೆಗಳನ್ನು ರದ್ದು ಮಾಡಿರುವುದಲ್ಲದೆ ಅಧಿಕಾರಿ ಗಳಿಂದ ಕಿರುಕುಳ ಕೊಡಿಸುವ ಕಾರ್ಯವೂ ನಡೆದಿದೆ. ಈ ಉದ್ದೇಶ ದಿಂದಲೇ ಅವರು ಬಳ್ಳಾರಿಯಲ್ಲಿ ಸ್ಥಾಪಿಸಬೇಕಾಗಿದ್ದ ಬೃಹತ್ ಉಕ್ಕು ಕಾರ್ಖಾನೆಯ ಯೋಜನೆಯನ್ನು ಕೈ ಬಿಟ್ಟಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಜಿಲ್ಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಳ್ಳಾರಿ ಇಲ್ಲದಿದ್ದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂಬುದನ್ನು ಬಹಿರಂಗವಾಗಿ ಪ್ರವಾಸೋದ್ಯಮ ಸಚಿವ ಜನಾದನ ರೆಡ್ಡಿ ಹೇಳಿದ್ದಾರೆ.

ಹೇಳಿಕೆಯ ಬೆನ್ನೆಲ್ಲೇ ನಮ್ಮಿಂದಲೇ ಈ ಸರ್ಕಾರ ಉರುಳಬೇಕೆಂಬ ನಿರ್ಧಾರ ಕೈಗೊಂಡು ಅತ್ಯಂತ ಗೌಪ್ಯ ವಾಗಿ ಕಾರ್ಯಚಟುವಟಿಕೆ ನಡೆಸಿದ್ದಾರೆ. ಯಡಿಯೂರಪ್ಪ ಹಠಾವೋ ಕಾರ್ಯ ಕ್ರಮದಲ್ಲಿ ಭಿನ್ನಮತೀಯ ನಾಯಕ ರಾದ ಅನಂತಕುಮಾರ್ ಹಾಗೂ ಈಶ್ವರಪ್ಪ ಅವರ ಜೊತೆ ದೆಹಲಿಗೆ ತೆರಳಿ, ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದ್ದ ರೆಡ್ಡಿ ಅಲ್ಲಿಂದ ಹಿಂತಿರುಗುತ್ತಿ ದ್ದಂತೆಯೇ ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ಕೆ ಇಳಿದಿದ್ದಾರೆ. ಬಳ್ಳಾರಿಯಲ್ಲೇ ಕುಳಿತು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇವರ ಗುಂಪಿಗೆ ಬರುವ ಶಾಸಕರು ಮುಂದಿನ ದಿನಗಳಲ್ಲಿ ಎಂತಹದ್ದೇ ನಿರ್ಣಯ ಕೈಗೊಳ್ಳಲು ಸಿದ್ಧರಿರಬೇಕು. ಈಗಾಗಲೇ ೧೩ ಶಾಸಕ ರನ್ನು ತಮ್ಮೊಟ್ಟಿಗೆ ಗುರುತಿಸಿ ಕೊಂಡಿ ದ್ದು, ಇದರ ಸಂಖ್ಯೆಯನ್ನು ೧೭ಕ್ಕೆ ಹೆಚ್ಚಿಸಿ ಕೊಳ್ಳಲು ಪ್ರಯತ್ನ ಮಾಡಿದ್ದಾರೆ.

ತಾವು ನಿಗದಿ ಪಡಿಸಿಕೊಂಡಿರುವ ಗಡಿಯಲ್ಲೇ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಪಕ್ಷದ ಮುಖಂ ಡರಲ್ಲದೆ ಪ್ರತಿಪಕ್ಷದ ನಾಯಕರ ಸಹ ಕಾರ ಪಡೆಯುತ್ತಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಜನಾದನ ರೆಡ್ಡಿ, ಕಡುವೈರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಯವರನ್ನು ಸಂಪರ್ಕಿಸಿ ಮಾತು ಕತೆ ನಡೆಸಿದ್ದಾರೆ. ಯಡಿಯೂರಪ್ಪ ವಿರುದ್ಧ ಬಂಡಾ ಯ ಆರಂಭಗೊಳ್ಳುವ ಮುನ್ನ ರೆಡ್ಡಿ ಗುಂಪಿಗೆ ಸೇರಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕುಮಾರ ಸ್ವಾಮಿಯ ವರನ್ನು ಭೇಟಿ ಮಾಡಿ ಮಾತ ಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬ ಹುದಾಗಿದೆ.

Advertisements
Posted in: National News