ಮಂಗಳೂರು ಜನತೆಗೆ ಬಿಜೆಪಿ ಶಾಕ್: ಆಸ್ತಿ ತೆರಿಗೆ ಯಲ್ಲಿ ಹೆಚ್ಚಳ!

Posted on April 1, 2011

0


ಮಂಗಳೂರು: ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದು ಮೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ತೆರಿಗೆಯಲ್ಲಿ ೧೫ ಶೇಕಡಾ ಹೆಚ್ಚಳ ಮಾಡು ವುದು ಅನಿವಾರ್ಯವಾಗಿದೆ ಎಂದು ಮೇಯರ್ ಅವರು ಹೇಳುವ ಮೂಲಕ ಪಾಲಿಕೆ ವ್ಯಾಪ್ತಿಗೊಳಪಟ್ಟ ಜನತೆಗೆ ಭಾರೀ ಶಾಕ್ ನೀಡಿದ್ದಾರೆ.

೨೦೦೮, ಎಪ್ರಿಲ್ ಒಂದರಂದು ಭಾರೀ ವಿರೋಧಕ್ಕೆ ಕಾರಣವಾಗಿದ್ದ ಸ್ವಯಂಘೋಷಿತ ಆಸ್ತಿ ತೆರಿಗೆ ಮಂಗ ಳೂರಲ್ಲೂ ಜಾರಿಗೆ ಬಂದಿತ್ತು. ಅದಕ್ಕಿಂತ ಮೊದಲು ಈ ವಿಷಯ ಪಾಲಿಕೆ ಸಭೆಯಲ್ಲಿ ಪ್ರಸ್ತಾಪವಾದಾಗ, ಕಾಂಗ್ರೆಸ್ ಆಡಳಿತಗಾರರು ಈ ನಿಯ ಮವನ್ನು ಜಾರಿಗೆ ತರುವ ಮೂಲಕ ಜನರ ಮೇಲೆ ಹೊರೆ ಹೇರುತ್ತಿದೆ ಎಂದು ಎಂದು ಬೊಬ್ಬಿಟ್ಟ್ಟಿದ್ದ ಅಂದಿನ ವಿರೋಧ ಪಕ್ಷ ಬಿ.ಜೆ.ಪಿ., ಚುನಾವಣೆಯ ಸಂದರ್ಭ ಇದನ್ನೇ ಪ್ರಮುಖ ಅಸ್ತ್ರವ ನ್ನಾಗಿಸಿತ್ತು. ಆದರೆ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಪ್ರಥ ಮವಾಗಿ ಮಾಡಿದ ಘನಂದಾರಿ ಕೆಲಸ ಈ ಯೋಜನೆಯನ್ನು ಜಾರಿ ಮಾಡಿದ್ದು.

ಇದರ ವಿರುದ್ಧ ಪಾಲಿಕೆಯೊಳಗೂ, ಹೊರಗೂ ಭಾರೀ ವಿರೋಧ ವ್ಯಕ್ತ ವಾದ ಸಂದರ್ಭ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಜಿಲ್ಲಾಧಿಕಾರಿಯವರು ಜಾರಿಗೆ ತಂದಿದ್ದಾರೆ ಎಂದು ಸಬೂಬು ನೀಡಿದ್ದ ಆಡಳಿತಗಾರರು ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದಾಗಿ ಸಮಾಧಾನ ಪಡಿಸುತ್ತಾ ಬಂದಿದ್ದರಾದರೂ ಅದು ಬೊಗಳೆ ಎಂದು ನಂತರ ಸಾಬೀತಾಗಿತ್ತು.

ಕಳೆದ ತಿಂಗಳು ನಡೆದ ಪಾಲಿಕೆಯ ಸಾಮಾನ್ಯ ಸಭೆಯ ವೇಳೆಗೆ ತೆರಿಗೆ ಏರಿಕೆಯ ವಾಸನೆ ಬಡಿದಿತು. ಇದರ ವಿರುದ್ಧ ವಿರೋಧ ಪಕ್ಷಗಳು ತಕರಾರು ಎತ್ತಿದ್ದು ಆ ಸಂದರ್ಭ ಅಂದಿನ ಮೇಯರ್ ರಜನಿ ದುಗ್ಗಣ್ಣ ಅವರು ಅಂತಹ ಪ್ರಸ್ತಾವನೆ ಇಲ್ಲ. ಅದೆಲ್ಲಾ ಕಪೋಲಕಲ್ಪಿತ ವಿಷಯ ಎಂದು ಸಬೂಬು ನೀಡಿ ಜಾರಿಕೊಂಡಿದ್ದರು. ಆದರೆ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮೇಯರ್ ಪ್ರವೀಣ್ ಅವರು ಸ್ವತಃ ಸ್ವಯಂಘೋಷಿತ ಆಸ್ತಿ ತೆರಿಗೆ ಏರಿಕೆಯ ಬಗೆಗಿನ ಮಾಹಿತಿಯನ್ನು ಬಹಿರಂಗ ಗೊಳಿಸಿದ್ದು, ಈ ಮೂಲಕ ವಿಷ ಯದಲ್ಲಿ ಆಡಳಿತಗಾರರು ಹಿಂದೆಲ್ಲಾ ನೀಡಿದ್ದ ಭರವಸೆಗಳು ಸುಳ್ಳೆಂದು ಸಾಬೀತಾಗಿದೆ.

ಸ್ವಯಂಘೋಷಿತ ಆಸ್ತಿ ತೆರಿ ಗೆಯು ಪ್ರತೀ ಮೂರು ವರ್ಷಗಳಿ ಗೊಮ್ಮೆ ಏರಿಕೆ ಮಾಡಬೇಕು ಎಂಬ ಸರಕಾರದ ನಿಯಮವಿರುವ ಕಾರಣ ಪಾಲಿಕೆಯ ಆಡಳಿತಗಾರರು ಏನೂ ಮಾಡುವಂತಿಲ್ಲ ಎಂದು ಮೇಯರ್ ಸಮರ್ಥನೆ ನೀಡಿದರಾದರೂ ಅದನ್ನು ತಡೆಯಲು ಪ್ರಯತ್ನ ಮಾಡಬಹು ದಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ. ಮುಂದೆ ಈ ವಿಷಯ ವೇ ಸಂಘ-ಸಂಸ್ಥೆಗಳು ಮತ್ತು ವಿರೋ ಧ ಪಕ್ಷಗಳಿಗೆ ಪ್ರತಿಭಟನೆಯ ಅಸ್ತ್ರ ವಾಗುವುದನ್ನು ಅಲ್ಲಗಳೆಯುವಂತಿಲ್ಲ.

Advertisements