ಭಾರತೀಯರು ೧೨೧ ಕೋಟಿ

Posted on April 1, 2011

0


ನವದೆಹಲಿ: ಬಹುನಿರೀಕ್ಷಿತ ಜನಗಣತಿಯ ಅಂಕಿ ಅಂಶವು ಗುರು ವಾರ ಹೊರಬಿದ್ದಿದ್ದು, ಇದರ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ ೧೨೧ ಕೋಟಿ. ಪುರುಷರ ಸಂಖ್ಯೆ ೬೨.೩೭ ಕೋಟಿ ಹಾಗೂ ಮಹಿಳೆಯರ ಸಂಖ್ಯೆ ೫೮.೬೫ ಕೋಟಿ. ಆದರೆ ಒಟ್ಟಾರೆ ಅಕ್ಷರಸ್ಥರ ಸಂಖ್ಯೆ ಇನ್ನೂ ಶೇ.೩೮.೮೨ ಮಾತ್ರ!

ಜನಗಣತಿ ಅಂಕಿ ಅಂಶಗಳ ಪ್ರಕಾರ ಪ್ರಮುಖ ಅಂಶಗಳು ಹೀಗಿವೆ. ಲಿಂಗಾನುಪಾತದ ವ್ಯತ್ಯಾಸ ಕಡಿಮೆ ಯಾಗಿದೆ ೨೦೦೧ಕ್ಕೆ ಹೋಲಿಸಿದರೆ ಪುರುಷ ಮತ್ತು ಮಹಿಳಾ ಸಂಖ್ಯೆಯ ಅನುಪಾತದಲ್ಲಿನ ವ್ಯತ್ಯಾಸ ಕಡಿಮೆ ಯಾಗಿದೆ. ೨೦೦೧ರಲ್ಲಿ ೧೦೦೦ ಪುರುಷರಿಗೆ ೯೩೩ ಮಹಿಳೆಯರಿದ್ದರೆ (ವ್ಯತ್ಯಾಸ ಸಾವಿರಕ್ಕೆ ೬೭), ೨೦೧೧ರಲ್ಲಿ ಈ ಅನುಪಾತವು ೧೦೦೦:೯೪೦ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ ೬೦. ಆತಂಕದ ವಿಷಯವೆಂದರೆ ಮಕ್ಕಳ ಲಿಂಗಾನುಪಾತದಲ್ಲಿ ಹೆಚ್ಚಳ. ಮಕ್ಕಳ ಲಿಂಗಾನುಪಾತವು ೧೦೦೦ ಬಾಲಕರಿಗೆ ೯೨೭ ಬಾಲಕಿಯರಂತೆ ಇದ್ದದ್ದು ೯೧೪ಕ್ಕೆ ತಲುಪಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ ೭೩ ಇದ್ದದ್ದು ೮೬ಕ್ಕೆ ಏರಿಕೆಯಾಗಿದೆ.

Advertisements
Posted in: National News