ಫಲಿಮಾರಿನಲ್ಲಿ ಬೋರ್‌ವೆಲ್ ರಾಜಕೀಯ

Posted on April 1, 2011

0


ಪಡುಬಿದ್ರಿ: ಬೋರ್‌ವೆಲ್ ನಿರ್ಮಾಣಕ್ಕೆ ಸಂಬಂಧಿಸಿ ಎರಡು ಗುಂಪುಗಳು ಪರಸ್ಪರ ವಿರೋಧ ವ್ಯಕ್ತಪಡಿಸಿದ ಘಟನೆ ಫಲಿಮಾರು ಪಂಚಾಯತ್ ಎದುರು ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಕುಡಿಯುವ ನೀರಿನ ತೀವ್ರ ಸಮಸ್ಯೆ ಯಿಂದ ಕಂಗೆಟ್ಟಿದ್ದ ಫಲಿಮಾರು ಗ್ರಾಪಂ, ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜಿ ಗಾಗಿ ಗಾ.ಪಂ ಕಚೇರಿ ಎದುರು ಬೋರ್ ವೆಲ್ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಗ್ರಾ.ಪಂನ ಎಲ್ಲಾ ಸದಸ್ಯರ ಸರ್ವಾನುಮತದ ನಿರ್ಣಯ ಪಡೆದುಕೊಂಡಿತ್ತು. ಅಂತೆಯೇ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ, ಜಿ. ಪಂ. ಎಂಜಿನಿಯರ್ ವಿಭಾಗ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅನುಮತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾ.ಪಂ ಪೊಲೀಸ್ ಬೆಂಗಾವಲಿನೊಂದಿಗೆ ಬೋರ್‌ವೆಲ್ ನಿರ್ಮಾಣಕ್ಕೆ ಮುಂದಾಗಿತ್ತು.

ಈ ಸಮಯ ಬೋರ್‌ವೆಲ್ ನಿರ್ಮಿಸ ಕೂಡದು ನಮ್ಮ ಬಾವಿಯ ನೀರು ಇಲ್ಲದಂ ತಾಗುತ್ತದೆ ಎಂದು ಒಂದು ಬಣ ವಾದಿಸಿದರೆ ಇನ್ನೊಂದು ಬಣ ನಮಗೆ ನೀರು ಬೇಕು. ನೀವು ಬೋರ್‌ವೆಲ್ ನಿರ್ಮಿಸಿ ಎಂದು ಹೇಳಿ ಗ್ರಾ.ಪಂ ಕಾಮಗಾರಿಗೆ ಬೆಂಬಲವಾಗಿ ನಿಂತರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಕೊನೆಗೆ ಪೊಲೀಸರ ಮಧ್ಯಪ್ರವೇಶದ ಬಳಿಕ ಕೊಳವೆಬಾವಿ ನಿರ್ಮಿಸಲಾಯಿತು.

Advertisements