ಪ್ರಾಂಶುಪಾಲರ ಕಾಮಕಾಂಡ: ಚಿತ್ರೀಕರಿಸಿ ಬ್ಲ್ಯಾಕ ್‌ಮೇಲ್ ಮಾಡಿದ ವಿದ್ಯಾರ್ಥಿಗಳ ಸೆರೆ

Posted on April 1, 2011

0


ಕುಂದಾಪುರ: ಇಲ್ಲಿನ ಶೈಕ್ಷಣಿಕ ಸಂಸ್ಥೆಯೊಂದರ ಪ್ರಾಂಶುಪಾಲರ ಕಾಮ ಕೇಳಿಯನ್ನು ಚಿತ್ರೀಕರಿಸಿ ವಿದ್ಯಾರ್ಥಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಕಾಮ ಕೇಳಿಯಲ್ಲಿ ಭಾಗವಹಿಸಿದ್ದ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ಪ್ರಾಂಶುಪಾಲನೊಂದಿಗೆ ಕಾಮ ಕೇಳಿ ಯಾಡಿದ ಮಹಿಳೆ ಈ ವಿಚಾರವನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದಳು. ಈ ಸಂದರ್ಭವನ್ನು ಬಳಸಿ ಕೊಂಡ ವಿದ್ಯಾರ್ಥಿಗಳು ಇವರ ಕಾಮ ಕೇಳಿ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದರೆನ್ನಲಾಗಿದೆ. ಆನಂತರ ಇದನ್ನು ಮುಂದಿಟ್ಟುಕೊಂಡು ಪ್ರಾಂಶು ಪಾಲರಿಗೆ ಹಣದ ಬೇಡಿಕೆ ಮುಂದಿಟ್ಟಿದ್ದರು ಎಂದು ತಿಳಿದುಬಂದಿದೆ. ತನ್ನ ಕಾಮಕೇಳಿ ದೃಶ್ಯ ಎಲ್ಲಾ ಮೊಬೈಲ್‌ಗಳಲ್ಲಿ ಬಿತ್ತರವಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಗಳ ಬ್ಲ್ಯಾಕ್ ಮೇಲ್‌ಗೆ ಮಣಿದು ಒಂದಷ್ಟು ಹಣವನ್ನು ಪ್ರಾಂಶುಪಾಲರು ನೀಡಿರುವುದೂ ಬೆಳಕಿಗೆ ಬಂದಿದೆ. ಆದರೆ ಕ್ರಮೇಣ ವಿದ್ಯಾರ್ಥಿಗಳ ಬ್ಲ್ಯಾಕ್‌ಮೇಲ್ ಒತ್ತಡ ಹೆಚ್ಚಿ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗಾಲಾದ ಪ್ರಾಂಶುಪಾಲ ಪೊಲೀಸರ ಮೊರೆ ಹೋಗಿದ್ದು, ಈ ಸಂಬಂಧ ಈಗಾಗಲೇ ಮೂರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಿಳೆಯು ಗಂಗೊಳ್ಳಿಯ ತ್ರಾಸಿ ಮೂಲದವಳಾಗಿದ್ದು, ಈಕೆಯ ಗಂಡ ಕೆಲವು ವರ್ಷಗಳ ಹಿಂದೆ ತಾಯಿಯ ಹತ್ಯಾ ಆರೋ ಪದಲ್ಲಿ ಶಿಕ್ಷೆಗೊಳಗಾಗಿ ಉಡುಪಿ ಜೈಲಿ ನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಈ ಮಹಿಳೆ ಈಗಾಗಲೇ ಹಲವು ಯುವಕರ ಸಂಪರ್ಕ ಹೊಂದಿದ್ದಾಳೆ ಎಂದು ಹೇಳ ಲಾಗುತ್ತಿದೆ. ಪ್ರಾಂಶುಪಾಲರನ್ನು ಸಿನಿಮಿಯ ಶೈಲಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ವಿದ್ಯಾರ್ಥಿಗಳು ಬಂಧನಕ್ಕೊಳಗಾಗಿದ್ದಾರೆ ಎಂದು ಹೇಳಲಾ ಗುತ್ತಿದೆಯಾದರೂ ವಿದ್ಯಾರ್ಥಿಗಳ ಮಾಹಿತಿ ಇನ್ನೂ ಸಿಕ್ಕಿಲ್ಲ. ಈ ಪ್ರಕರಣ ಕುಂದಾಪುರ ತಾಲೂಕಿನಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದು, ಜವಾಬ್ದಾರಿ ಸ್ಥಾನ ದಲ್ಲಿರುವ ಗಣ್ಯರು ತಮ್ಮ ಕಾಮದಾಸೆಗೆ ಇನ್ಯಾರದೋ ಬ್ಲ್ಯಾಕ್ ಮೇಲ್‌ಗೊಳಗಾಗಿ ಸಮಾಜದಲ್ಲಿ ತಲೆತಗ್ಗಿಸುವಂತಾಗಿರುವುದು ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisements
Posted in: Crime News