ಪಾಕ್ ಫಿಕ್ಸಿಂಗ್? ಸೋತವರ ಮೇಲೆ ಸಂಶಯದ ತೂಗುಗತ್ತ ಿ

Posted on April 1, 2011

0


ಲಾಹೋರ್: ಮ್ಯಾಚ್ ಫಿಕ್ಸಿಂಗ್ ಭೂತ ಮತ್ತೆ ಪಾಕಿಸ್ತಾನ ತಂಡವನ್ನು ಬೆನ್ನತ್ತಿದೆ. ಭಾರತದ ವಿರುದ್ಧದ ಸೆಮಿಫೈನಲ್ಸ್ ಪಂದ್ಯವನ್ನು ಪಾಕಿಸ್ತಾನ ಫಿಕ್ಸ್ ಮಾಡಿಕೊಂ ಡಿತ್ತು ಎಂದು ಆರೋಪಿಸಿ ಅಜರ್ ಸಿದ್ದಿಕ್ ಎನ್ನುವವರೊಬ್ಬರು ಲಾಹೋರ್ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನದ ಘನತೆಗೆ ಕಳಂಕ ತರಲೆಂದೇ ಇಡೀ ಪಾಕಿಸ್ತಾನ ತಂಡ ಕಳ್ಳಾಟ ದಲ್ಲಿ ಪಾಲ್ಗೊಂಡಿದೆ ಎಂದು ಹೈಕೋರ್ಟಿಗೆ ದೂರಿರುವ ಅವರು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಅಫ್ರಿದಿ ಮತ್ತು ಇತರ ಆಟಗಾರರು ಮಾಡಿರುವ ಎಲ್ಲ್ಲಾ ದೂರವಾಣಿ ಕರೆಗಳ ದಾಖಲಾತಿಗಳನ್ನು ಕೂಡಲೇ ತರಿಸಿಕೊಳ್ಳಬೇಕೆಂದು ನ್ಯಾಯಾ ಲಯಕ್ಕೆ ಮನವಿ ಮಾಡಿದ್ದಾರೆ.

ಪಂದ್ಯ ಆರಂಭವಾಗುವ ಮೊದಲು ಪಾಕಿಸ್ತಾನದ ಆಂತರಿಕ ವಿದ್ಯಮಾನಗಳ ಸಚಿವ ರೆಹಮಾನ್ ಮಲ್ಲಿಕ್ ಮತ್ತು ಮಾಹಿತಿ ಸಚಿವ ಫಿರ್ದೌಸ್ ಆಶಿಕ್ ಆವನ್ ಅವರಿಗೆ ಕರೆ ಮಾಡಿದ್ದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ರೆಹಮಾನ್ ಮಲ್ಲಿಕ್ ಅವರು ಪಂದ್ಯದ ಆರಂಭಕ್ಕೂ ಮುನ್ನ ಪಾಕಿಸ್ತಾನದ ಯಾವ ಆಟಗಾರನೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗ ಬಾರದು ಎಂದು ಎಚ್ಚರಿಕೆ ನೀಡಿದ್ದರು. ರೆಹಮಾನ್ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಸೇರಿದಂತೆ ಅನೇಕರು ಖಂಡಿಸಿದ್ದರು.

ಮಾರ್ಚ್ ೩೦ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಹೆಚ್ಚು ಆಯಾಸಪಟ್ಟುಕೊಳ್ಳದೆ ಪಾಕಿಸ್ತಾನದ ವಿರುದ್ಧ ೨೯ ರನ್ ಜಯ ಸಾಧಿಸಿದೆ. ಭಾರತದ ೨೬೧ ರನ್ ಮೊತ್ತವನ್ನು ಬೆಂಬತ್ತಿದ್ದ ಪಾಕಿ ೨೩೧ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಪಂದ್ಯದ ಯಾವುದೇ ಹಂತದಲ್ಲಿಯೂ ಗೆಲ್ಲುವ ಪ್ರಯತ್ನವನ್ನೇ ಮಾಡದಿರುವುದು ಅನೇಕ ಅನು ಮಾನಗಳಿಗೆ ದಾರಿಮಾಡಿಕೊಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಚಿನ್ ತೆಂಡೂಲ್ಕರ್ ಕೂಡ ಐದು ಬಾರಿ ಜೀವದಾನ ಪಡೆದಿರುವ ಅಂಶವನ್ನೂ ಉಲ್ಲೇಖಿಸಲಾಗಿದೆ. ಆದರೂ ಇದೊಂದು ಕೇವಲ ಪ್ರಚಾರಕ್ಕಾಗಿ ಮಾಡಿದ ಪ್ರಯತ್ನ ಎಂದು ಕ್ರಿಕೆಟಿಗರು ಹೇಳುತ್ತಿದ್ದಾರೆ. ಪಾಕಿಸ್ತಾನ ಪ್ರತೀ ಬಾರಿ ಸೋತಾಗಲೂ ಮ್ಯಾಚ್‌ಫಿಕ್ಸಿಂಗ್ ಭೂತ ಕಾಡುತ್ತದೆ ಎಂದು ಪಾಕ್ ಕ್ರಿಕೆಟ್ ತಂಡ ಹೇಳಿದೆ. ನಾವು ಗೆಲುವಿಗಾಗಿ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಫಿಕ್ಸಿಂಗ್ ಏನಿಲ್ಲ ಎಂದು ಪಾಕ್‌ನ ಕ್ರಿಕೆಟ್ ಮಂಡಳಿಯ ವರಿಷ್ಠರು ಹೇಳುತ್ತಿದ್ದಾರೆ.

ಪಂದ್ಯ ವೀಕ್ಷಿಸಲು ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಪಾಕಿಸ್ತಾನದ ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಯವರು ಮೊಹಾಲಿಗೆ ಬಂದಿದ್ದರು. ಪಾಕಿಸ್ತಾನವನ್ನು ಜಯಿಸಿರುವ ಭಾರತ ಮತ್ತು ನ್ಯೂಜಿಲೆಂಡನ್ನು ಗೆದ್ದಿರುವ ಶ್ರೀಲಂಕಾ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ ೨ರಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ೨೦೧೧ ಟ್ರೋಫಿಗಾಗಿ ಸೆಣಸಾಡಲಿವೆ.

ಮನಗೆದ್ದ ಅಫ್ರಿದಿ

ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಆಟ ಆಡುವ ಸಂದರ್ಭ ದಲ್ಲಿ ಪಾಕ್ ಆಟಗಾರರು ಅಗ್ರೆಸ್ಸಿವ್ ವರ್ತನೆಯನ್ನು ತೋರುತ್ತಾರೆ. ಬೆಂಗಳೂ ರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮೀರ್ ಸೊಹೈಲ್ ಹಾಗೂ ವೆಂಕಟೇಶ್ ಪ್ರಸಾದ್ ನಡುವಿನ ವಾಗ್ಯುದ್ಧ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಾರಿಯೂ ಇಂಥವೇ ಸಂದರ್ಭ ಬರಬಹುದು ಎಂದು ನಿರೀಕ್ಷಿಸ ಲಾಗಿತ್ತು. ಆದರೆ ಪಾಕಿಸ್ತಾನದ ಆಟಗಾರ ರಾಗಲಿ, ಭಾರತದ ಆಟಗಾರರಾಗಲಿ ಈ ಬಾರಿ ಕೇವಲ ಕ್ರೀಡಾ ಮನೋಭಾವದಿಂದ ಆಡಿದರೇ ಹೊರತು ತಮ್ಮ ಎದುರಾಳಿ ಗಳನ್ನು ಕಿಚಾಯಿಸಲು ಹೋಗಲಿಲ್ಲ. ಅದರಲ್ಲೂ ಪಾಕ್ ನಾಯಕ ಶಹೀದ್ ಅಫ್ರಿದಿಯ ವರ್ತನೆ ಗಮನ ಸೆಳೆಯಿತು. ಸಚಿನ್ ಬಾರಿ ಬಾರಿಗೆ ಜೀವದಾನ ಪಡೆಯುತ್ತಿದ್ದಾಗ ಅಫ್ರಿದಿ ಸಚಿನ್ ಜೊತೆ ಜೋಕ್ ಮಾಡಿದ್ದು, ಇಬ್ಬರೂ ನಕ್ಕಿದ್ದು ದಾಖಲಾಗಿದೆ. ಪಂದ್ಯದ ಮೊದಲು ಸಚಿನ್ ಸೆಂಚುರಿಯ ಸೆಂಚುರಿಗೆ ಅವಕಾಶ ಮಾಡಿಕೊಡಲಾರೆವು ಎಂದಿದ್ದ ಅಫ್ರಿದಿ ಮೈದಾನದಲ್ಲಿ ಮಾತ್ರ ಆಟಗಾರನಂತೆ ವರ್ತಿಸಿದರೇ ಹೊರತು ಎದುರಾಳಿ ಆಟಗಾರ ಎಂಬಂತೆ ನೋಡಲಿಲ್ಲ. ಹರ್ಭಜನ್ ಸಿಂಗ್ ಜೊತೆಯೂ ಅಫ್ರಿದಿ ಪ್ರಾಣ ಸ್ನೇಹಿತನಂತೆ ನಡೆದುಕೊಂಡರು. ಸಾಮಾನ್ಯವಾಗಿ ಎದುರಾಳಿ ತಂಡದ ಆಟಗಾರರನ್ನು ಪ್ರಚೋದಿಸುವಂತೆ ವರ್ತಿಸುವ ಹರ್ಭಜನ್‌ಗೆ ಅಫ್ರಿದಿ ವರ್ತನೆ ಅಚ್ಚರಿ ತರಿಸಿದ್ದಂತೂ ನಿಜ.

ತಾಜ್ ಹೊಟೇಲ್‌ನಲ್ಲಿ ಭಜ್ಜಿಯೊಂದಿಗೆ ಕಾಣಿಸಿದ ಬಸ್ರಾ

ಭಾರತ ತಂಡ ಮೊಹಾಲಿಯಿಂದ ಫೈನಲ್ ಪಂದ್ಯಾಟಕ್ಕೆ ಮುಂಬೈ ಆಗಮಿಸಿ ತಾಜ್ ಹೊಟೇಲಿನಲ್ಲಿ ತಂಗಿದ್ದ ವೇಳೆ ಸ್ಪಿನ್ನರ್ ಹರ್ಭಜನ್ ಸಿಂಗ್‌ನೊಂದಿಗೆ ಹಿಂದಿ ನಿಂದಲೂ ಸುತ್ತಾಡುತ್ತಿದ್ದ ತೆರೆಮರೆಯ ನಟಿ ಗೀತಾ ಬಸ್ರಾ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹರ್ಭಜನ್ ಇದ್ದ ಹೊಟೇಲ್‌ನಲ್ಲೇ ಗೀತಾ ಬಸ್ರಾ ತಂಗಿದ್ದಾಳೆ. ಕೆಲ ಆಟಗಾರರೊಂದಿಗೆ ಹುಡುಗಿಯರು ಕಾಣಿಸಿಕೊಂಡು ಪ್ರಚಾರಕ್ಕೆ ಬರುವುದು ಹೊಸತೇನಲ್ಲ. ಅವರು ಬೇಡವೆಂದರೂ ತಮ್ಮ ಹಿತಕ್ಕಾಗಿ ಆಟಗಾರರ ಹಿಂದೆ ತಿರುಗಾಡುತ್ತಾರೆ. ಅವರಲ್ಲಿ ಹೆಚ್ಚಿನ ಅವಕಾಶಗಳು ನಟಿಯರ ಪಾಲಿಗೆ ಸಿಗುತ್ತದೆ. ಕೆಲ ವರ್ಷದಿಂದ ಅವಿವಾಹಿತ ಪಂಜಾಬಿ ಹರ್ಭಜನ್ ಸಿಂಗ್ ನೊಂದಿಗೆ ಒಂದೆರಡು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಗೀತಾ ಬಸ್ರಾ ಕಾಣಿಸಿಕೊಂಡಿದ್ದಾಳೆ. ಭಾರತ ತಂಡ ತಾಜ್ ಹೊಟೇಲು ಪ್ರವೇಶಿಸುವ ಹೊತ್ತಿನಲ್ಲೇ ಗೀತಾ ಬಸ್ರಾ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಡೀ ತಂಡದಲ್ಲಿ ಗೀತಾ ಬಸ್ರಾ ಒಬ್ಬಳೇ ಕಾಣಿಸಿಕೊಂಡಿ ರುವುದರಿಂದ ಕ್ಯಾಮರಾ ಕಣ್ಣಲ್ಲಿ ಮಿಂಚಿದ್ದಾಳೆ. ಹೀಗೆ ಹರ್ಭಜನ್ ಮತ್ತು ಗೀತಾ ಒಂದೊಮ್ಮೆ ಮದುವೆಯಾಗುವ ಅಂತೆಕಂತೆಗಳು ಕೇಳಿಬಂದಿತ್ತಾದರೂ ಬಳಿಕ ಹಾಗೆಯೇ ಉಳಿದಿತ್ತು. ಇದೀಗ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿರುವುದರಿಂದ ಇವರಿಬ್ಬರ ನಡುವಿನ ಸಂಬಂಧ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ.

ಪಾಕಿಸ್ತಾನ ಸೋಲು: ನಟನಿಗೆ ಹೃದಯಾಘಾತ

ಕರಾಚಿ: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿ ಫೈನಲ್ಸ್ ಪಂದ್ಯವನ್ನು ವೀಕ್ಷಿ ಸುತ್ತಿದ್ದಾಗ ಟೀಮ್ ಇಂಡಿಯಾ ಗೆಲುವು ಸಾಧಿಸಿದ ಸಂದರ್ಭದಲ್ಲಿ ಪಾಕಿಸ್ತಾನದ ಹಾಸ್ಯ ನಟ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.ಮೊಹಾಲಿಯಲ್ಲಿ ಬದ್ಧವೈರಿಗಳ ನಡುವಿನ ಹಣಾಹಣಿಯಲ್ಲಿ ಭಾರತ ಜಯಭೇರಿ ಬಾರಿಸಿದ್ದನ್ನು ಕಂಡ ಪಾಕ್ ಹಾಸ್ಯನಟ ಲಿಯಾಖತ್ ಸೋಲ್ಜರ್ (೫೫) ಬುಧವಾರ ಸಾವನ್ನಪ್ಪಿರುವುದಾಗಿ ಡೈಲಿ ಟೈಮ್ಸ್ ವರದಿ ಮಾಡಿದೆ. ಸ್ಥಳೀಯ ಟಿವಿ ಚಾನೆಲ್‌ವೊಂದು ಭಾರತ-ಪಾಕ್ ನಡುವಿನ ಸೆಮಿಫೈನಲ್ಸ್ ಪಂದ್ಯಾಟದ ಬಗ್ಗೆ ವಿಶೇಷ ಕಾರ್ಯಕ್ರಮಕ್ಕೆ ಲಿಯಾಖತ್ ಅವರನ್ನು ಆಹ್ವಾನಿಸಿತ್ತು.

ಈ ಸಂದರ್ಭದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆಯಲ್ಲಿಯೇ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ. ಲಿಯಾಖತ್ ಅವರು ೧೯೭೩ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ಸುಮಾರು ೨೫೦ಕ್ಕೂ ಹೆಚ್ಚಿನ ಟಿವಿ ಷೋ ನೀಡಿದ್ದರು. ಲಿಯಾಖತ್ ಅವರು ದೇಶ-ವಿದೇಶಗಳಲ್ಲೂ ನಾಟಕಗಳಲ್ಲಿ ಅಭಿನಯಿಸಿದ್ದು, ಸುಮಾರು ೫೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.ಮೊಹಾಲಿಯಲ್ಲಿ ನಡೆದ ಕದನದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ೨೯ ರನ್‌ಗಳಿಂದ ಸೋಲಿಸಿತ್ತು.

Advertisements
Posted in: Sports News