ನಮಗೆ ಸಾಧ್ಯವಿದೆ: ಜಯವರ್ಧನೆ

Posted on April 1, 2011

0


ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧದ ನಾವು ಭರ್ಜರಿಯಾಗಿ ಜಯ ಸಾಧಿಸಿದ್ದ ರೀತಿಯನ್ನು ನೋಡಿದರೆ ಶನಿ ವಾರದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಲು ನಮಗೆ ಸಾಧ್ಯವಿದೆ ಎಂದು ಶ್ರೀಲಂಕಾ ಮಧ್ಯಮ ಕ್ರಮಾಂಕದ ಆಟಗಾರ ಜಯವರ್ಧನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ನಲ್ಲಿ ನಾವು ನೀಡಿದ ಪ್ರದರ್ಶನವನ್ನು ಗಮನಿ ಸಿದರೂ ಕೂಡ ನಮಗೆ ಭಾರತ ವಿರುದ್ಧ ಪಂದ್ಯದಲ್ಲಿ ಜಯ ಸಾಧಿಸಲು ಎಲ್ಲಾ ಅವಕಾಶವಿದೆ. ಆಟಗಾರರು ಈ ಬಗ್ಗೆ ಕುತೂಹಲದಿಂದ ಕೂಡಿದ್ದು ಪಂದ್ಯಕ್ಕೆ ಕಾತು ರರಾಗಿದ್ದಾರೆ. ಭಾರತ ತನ್ನ ವಿಶ್ವಕಪ್ ಅನ್ನು ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಅರ್ಪಿಸಲು ಪಣತೊಟ್ಟಿದೆ, ಹಾಗೇನೆ ನಾವು ಕೂಡ ಪ್ರಶಸ್ತಿಯನ್ನು ಜಯಿಸಲು ಸಫಲ ವಾದರೆ ನಿವೃತ್ತಿ ಹೊಂದಲಿರುವ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್‌ಗೆ ಅರ್ಪಿಸಲಿದ್ದೇವೆ ಎಂದು ಮಹೇಲಾ ಹೇಳಿದರು.

Advertisements
Posted in: Sports News