ತೊಕ್ಕೊಟ್ಟು: ತೊಟ್ಟಿಕ್ಕುವ ಕೊಳಚೆ ನೀರು

Posted on April 1, 2011

0


ಮಂಗಳೂರು: ರಾ.ಹೆ.೧೭ರ ಉಳ್ಳಾಲ ಪುರಸಭಾ ವ್ಯಾಪ್ತಿಗೊಳ ಪಡುವ ತೊಕ್ಕೊಟ್ಟು ನಗರ ವ್ಯಾಪಾರ ಮಳಿಗೆಗಳಲ್ಲಿ ಸಾಕಷ್ಟು ಅಭಿ ವೃದ್ಧಿಯನ್ನು ಕಂಡಿದ್ದರೂ, ಮೂಲ ಭೂತ ಸೌಕರ್ಯಗಳಿಂದ ವಂಚಿ ತವಾಗಿದೆ.

ಶಿಕ್ಷಣ, ವ್ಯಾಪಾರ, ಆರೋಗ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿರುವ ನಗರ ತೊಕ್ಕೊಟ್ಟು. ನಿತ್ಯ ಸಾವಿರಾರು ಜನ ಸಂದಣಿ ಇರುವ ಪ್ರದೇಶ ಇದಾಗಿದ್ದರೂ ಚರಂಡಿ, ಒಳರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳಿಂದ ವಂಚಿv ಗೊಂಡಿದೆ. ಮುಖ್ಯವಾಗಿ ಆರೋಗ್ಯ ಕಾಪಾಡಲೆಂದು ಇರುವ ತೊಕ್ಕೊಟ್ಟು ಸಹಾರ ಆಸ್ಪತ್ರೆ ಎದುರುಗಡೆ ತ್ಯಾಜ್ಯ ನೀರು ಹರಿಯಲೆಂದು ಇರುವ ಚರಂಡಿ ತುಂಬಿ ತುಳುಕುತ್ತಿದೆ. ಈ ಬಗ್ಗೆ ತಿಂಗಳಿಂದೀಚೆಗೆ ಇಲ್ಲಿ ತೊಂದರೆಯನ್ನು ಅನುಭವಿಸುತ್ತಿರುವ ಪಾದಚಾರಿಗಳು ಹಾಗೂ ವ್ಯಾಪಾರಸ್ಥರು ಪುರಸಭೆಗೆ ಸದಸ್ಯರ ಮೂಲಕ ದೂರನ್ನು ನೀಡಿದರೂ ಪ್ರಯೋಜನವಾಗಿಲ್ಲ.

ಸಹಾರ ಆಸ್ಪತ್ರೆ ಎದುರುಗಡೆ ತೆರೆದಿರುವ ಚರಂಡಿಯನ್ನು ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ಅದಕ್ಕೆ ಬಿದ್ದು ಮೈಪೂರ್ತಿ ಮಲಿನ ಗೊಳ್ಳುತ್ತಿರುವುದು ಇಲ್ಲಿ ಮಾಮೂ ಲಾಗಿದೆ.

ಹೊಟೇಲು, ವಾಣಿಜ್ಯ ಸಂಕೀರ್ಣ ಹೀಗೆ ಹಲವು Pಡೆಗ ಳಿಂದ ಬರುವ ತ್ಯಾಜ್ಯ ನೀರಿನಿಂದ ವಾತಾವರಣ ದುರ್ನಾತ ಬೀರುತ್ತಿದ್ದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಪ್ರಮುಖವಾಗಿ ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಹಾದು ಹೋಗುವ ದಾರಿಯಲ್ಲಿ ಮತ್ತು ಇಲ್ಲಿಯ ವಾಣಿಜ್ಯ ಕಟ್ಟಡದ ಹಿಂಭಾಗ ಕಸದ ರಾಶಿಯು ಸದಾ ತುಂಬಿರುತ್ತದೆ.

ಅಲ್ಲದೇ ಕೆಲವರು ಇಲ್ಲೇ ಮೂತ್ರ ಶಂಕೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲುವುದೇ ಕಷ್ಟವಾಗಿದೆ. ಪುರ ಸಭೆಯು ಈ ಬಗ್ಗೆ ಕ್ರಮ ತೆಗೆ ದುಕೊಳ್ಳದೇ ಇದ್ದರೆ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿವೆ.

ಪೊಲೀಸರಿಗೂ ತೊಂದರೆ

ತ್ಯಾಜ್ಯ ನೀರು ಚರಂಡಿ ಬಿಟ್ಟು ರಸ್ತೆಗಳಲ್ಲಿ ಸಂಚರಿಸುವುದರಿಂದ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿರುವುದಂತು ನಿಜ. ಆದರೆ ಇಲ್ಲೇ ಉಳ್ಳಾಲ ಪೊಲೀಸರ ಔಟ್ ಪೋಸ್ಟ್ ಇರುವುದರಿಂದ ರಾತ್ರಿಯಿಂದ ಬೆಳಗ್ಗಿನವರೆಗೆ ಗಸ್ತು ಕಾಯುವ ಪೊಲೀಸರು ಇದೇ ತ್ಯಾಜ್ಯದ ಹತ್ತಿರದಲ್ಲೇ ಕುಳಿತು ಸೊಳ್ಳೆ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರಂತೂ ಬೆಂಕಿ ಹಾಕಿ ಕಾವಲು ಕಾಯುತ್ತಿದ್ದಾರೆ, ಇನ್ನು ಕೆಲವರು ಸೊಳ್ಳೆ ಹೊಡೆತ ವನ್ನು ಸಹಿಸಿಕೊಂಡು ತಮ್ಮ ರಾತ್ರಿ ಡ್ಯೂಟಿಯಲ್ಲಿ ದಿನ ದೂಡುತ್ತಿದ್ದಾರೆ. ಇದರಿಂದಾಗಿ ಹಲವು ಪೊಲೀಸರು ಮಲೇರಿಯಾ ರೋಗಕ್ಕೆ ತುತ್ತಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.

Advertisements