ಜಪ್ಪಿನಮೊಗರುವಿನಲ್ಲಿ ಕ್ರೀಡೋತ್ಸವ

Posted on April 1, 2011

0


ಮಂಗಳೂರು: ಜಪ್ಪಿನ ಮೊಗರು ಬಂಟರ ಸಂಘದ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ಬಂಟ ಕ್ರೀಡೋತ್ಸವವು ಎ.೩ರಂದು ಬಾಕಿಮಾರು ಮನೆ ಬಳಿಯ ಗದ್ದೆಯಲ್ಲಿ ನಡೆಯಲಿದೆ.

ಮಕ್ಕಳ ಸ್ಪರ್ಧೆ(೬ವರ್ಷದವರೆಗಿನ ಮಕ್ಕಳಿಗೆ)ಚೆಂಡು ಪಾಸು ಮಾಡುವುದು, ೫೦ಮೀ.ಓಟ, ೬ರಿಂದ ೧೨ವರ್ಷದವರೆಗಿನ ಮಕ್ಕಳಿಗೆ ಬಟಾಟೆ ಓಟ, ೫೦ ಮೀ. ಓಟ, ಲಗೋರಿ ಆಟ (೭ಜನರ ತಂಡ) , ೧೩ರಿಂದ ೧೮ ವರ್ಷದವರೆಗಿನ ಮಕ್ಕಳಿಗೆ ಗೋಣಿ ಚೀಲ ಜಿಗಿತ, ೧೦೦ಮೀ, ಓಟ, ಲಗೋರಿ ಆಟ, ೧೮ವರ್ಷದಿಂದ ಮೇಲ್ಪಟ್ಟು (ಪುರುಷ ಮತ್ತು ಮಹಿಳೆಯರಿಗೆ)ಗರಿ ಹೆಣೆಯುವುದು, ಹಿಡಿಸೂಡಿ ತಯಾರಿ, ರಿಲೇ ಓಟ, ಗುಂಡೆಸೆತ, ತೆಂಗಿನಕಾಯಿ ಸಿಪ್ಪೆ ಸುಳಿಯುವುದು, ೬೦ವರ್ಷದ ಹಿರಿಯರಿಗೆ ವೇಗದ ನಡಿಗೆ, ವಿಶೇಷ ಆಕರ್ಷಕ ಸ್ಪರ್ಧೆಯಾಗಿ ದಂಪತಿಗಳ ಓಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಇತ್ಯಾದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರ.ಕಾ.ಸೀತಾರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎ.೯ರಂದು ವಾರ್ಷಿಕೋತ್ಸವ ನಡೆಯಲಿದೆ ಎಂದು ಅವರು ವಿವರಿಸಿದರು. ಅಧ್ಯಕ್ಷ ಕೆ.ಜಗದೀಶ ಶೆಟ್ಟಿ ಉಪಾಧ್ಯಕ್ಷರುಗಳಾದ ಯು.ಕರುಣಾಕರ ಶೆಟ್ಟಿ ಸವಿತ ಆರ್.ಶೆಟ್ಟಿ ಕೋಶಾಧಿಕಾರಿ ಜಯಂತ್ ಶೆಟ್ಟಿ ಅವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisements