ಕುದ್ರೋಳಿಯಲ್ಲಿ ಚೂರಿ ಇರಿತ

Posted on April 1, 2011

0


ಮಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಚೂರಿ ಇರಿತದಲ್ಲಿ ಪರ್ಯವಸಾನವಾದ ಘಟನೆ ನಿನ್ನೆ ರಾತ್ರಿ ಕುದ್ರೋಳಿಯಲ್ಲಿ ನಡೆದಿದೆ.

ಕುದ್ರೋಳಿಯ ನಿವಾಸಿ ಪಯಾಝ್ ಎಂಬವರಿಗೆ ಇಬ್ರಾಹಿಂ ಜಲೀಲ್ ಎಂಬಾತ ಚೂರಿಯಿಂದ ಇರಿದಿದ್ದಾನೆನ್ನಲಾಗಿದ್ದು, ತಲೆ , ಕೈಗೆ ಇರಿತದ ಗಾಯಗೊಂಡಿರುವ ಫಯಾಜ್ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಳೆಯ ದ್ವೇಷವೇ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ.

Advertisements
Posted in: Crime News