ಎಸ್ಸೆಸ್ಸೆಫ್ ಸ್ಪಟಿಕ ಮಹೋತ್ಸವ ಸಮಾರೋಪ

Posted on April 1, 2011

0


ಮಂಗಳೂರು: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಬೆಂಗರೆ ಶಾಖೆಯ ಸ್ಪಟಿಕ ಮಹೋತ್ಸವದ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು.

ಜಮಾಅತ್ ಅಧ್ಯಕ್ಷ ಬಿ.ಹಸನ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆ.ಎ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಲ್ಕಟ್ಟ ಉದ್ಘಾಟಿಸಿದರು. ಪ್ರತಿ ದಿನ ರಾತ್ರಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಹುಮಾನ್ಯರಾದ ಜಮಾಲುದ್ದೀನ್ ಮುಸ್ಲಿಯಾರ್, ನೌಫಲ್ ಕಳಸ, ಟಿ.ಎಂ. ಮುಹಿಯು ದ್ದೀನ್ ಸಖಾಫಿ ತೋಕೆ, ಹಮೀದ್ ಫೈಝಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಬಹು.ಅಸ್ಸೆಯ್ಯದ್ ಅಬೂಬಕರ್ ಸಿದ್ದೀಖ್ ತಂಗಳ್ ಮುರ ಭಾಗವಹಿಸಿ ದುವಾ ಆಶೀರ್ವ ಚನ ನೀಡಿದರು. ವೇದಿಕೆಯಲ್ಲಿ ಮಾಜಿ ಕಾರ್ಪೊರೇಟರ್ ಹಾಜಿ ಎಂ. ಫಾರೂಕ್, ಇಸ್ಮಾಯಿಲ್ ಸೈದಾಲಿ, ಜಬ್ಬಾರ್ ಕಣ್ಣೂರ್, ಮನ್ಸೂರ್ ಬಜಾಲ್, ಹನೀಫ್ ಹಾಜಿ ಬೆಂಗರೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಸೈನಾರ್ ಸ್ವಾಗತಿಸಿ ಧನ್ಯವಾದಗೈದರು. ಬಿ.ಎ. ಹಮೀದ್ ಕಾರ್ಯಕ್ರಮ ನಿರೂಪಿಸಿದರು.

Advertisements