ಉಡುಪಿ: ತರುಣಿ ನೇಣಿಗೆ ಶರಣು

Posted on March 31, 2011

0


ಉಡುಪಿ: ತರುಣಿಯೋರ್ವಳು ಮನೆಯ ಪಕ್ಕಾಸಿಗೆ ಚೂಡಿದಾರದ ಸಾಲು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಹಿಡಿಯಡ್ಕ ಠಾಣಾ ವ್ಯಾಪ್ತಿಯ ಬೈರಂಪಳ್ಳಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಬೈರಂಪಳ್ಳಿ ಆನಂದ ಶೆಟ್ಟಿಯವರ ತಂಗಿ ಮಗಳು ನಿಶ್ಮಿತಾ (೧೫) ಎಂಬಾಕೆ ಋತುಸ್ರಾವದ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾ ಗಿದೆ. ಇದರಿಂದ ನೊಂದ ತರುಣಿ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಪಕ್ಕಾಸಿಗೆ ಚೂಡಿದಾರದ ಸಾಲು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Posted in: Crime News