ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Posted on March 31, 2011

0


ಕಾಸರಗೋಡು: ಪ್ರಯಾಣದ ನಡುವೆ ಬಳಲಿಕೆಯಿಂದ ಬಸವಳಿದ ತಂದೆಯ ಆರೈಕೆಗೆ ನೀರು ತರಲು ತೋಟದ ಕೆರೆಗಿಳಿದ ಯುವಕ ನೀರುಪಾಲಾಗಿ ಮೃತಪಟ್ಟ ಘಟನೆ ಎಡನೀರು ಸಮೀಪ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಕಾಞಂಗಾಡ್‌ನ ಮಾವುಂಗಾಲ್ ಕೋಟಪ್ಪಾರೆಯ ಕುಞಂಬು ಆಚಾರ್ಯ ಪದ್ಮಾವತಿ ದಂಪತಿಯರ ಪುತ್ರ ಸತೀಶ (೩೧) ಎಂಬವರೇ ಮೃತಪಟ್ಟವರು. ಇವರು ತಾಯ್ತಂದೆ ಹಾಗೂ ಸಪತ್ನೀಕರಾಗಿ ಎಡನೀರು ವೀರಮೂಲೆಯಲ್ಲಿರುವ ಕುಟುಂಬ ದೈವಸ್ಥಾನಕ್ಕೆ ದೈವಕೋಲದಲ್ಲಿ ಪಾಲ್ಗೊಳ್ಳಲು ಸುಮೋ ವಾಹನದಲ್ಲಿ ಆಗಮಿಸುತ್ತಿದ್ದರು.
ಎಡನೀರು ಸಮೀಪ ಆಗಮಿಸಿದಾಗ ಕುಞಂಬು ಅವರು ಬಳಲಿಕೆಯಿಂದ ಕುಸಿದರು. ವಾಹನವನ್ನು ರಸ್ತೆ ಬದಿ ನಿಲ್ಲಿಸಿದ ಸತೀಶ ತಂಬಿಗೆಯೊಂದಿಗೆ ಸಮೀಪದ ತೋಟದ ಕೆರೆಗೆ ಇಳಿದಾಗ ಕಾಲುಜಾರಿ ಬಿದ್ದರು. ಅಗ್ನಿಶಾಮಕ ದಳದವರು ಆಗಮಿಸಿ ಮೇಲಕ್ಕೆತ್ತುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

Advertisements
Posted in: Crime News