ವಿಷಪ್ರಾಷಣ: ವಿದ್ಯಾರ್ಥಿ ಸಾವು

Posted on March 25, 2011

0


ಮಂಗಳೂರು: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾಸರಗೋಡಿನ ಕೂಡ್ಲು ಕಾಳ್ಯಂಗಾಡು ಕಾಲನಿ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯನ್ನು ಕೂಡ್ಲು ಕಾಳ್ಯಂಗಾಡು ಕಾಲನಿಯ ಬಾಬು ಹಾಗೂ ಸುಶೀಲ ದಂಪತಿಯ ಪುತ್ರ ಪ್ಲಸ್ ವನ್ ವಿದ್ಯಾರ್ಥಿ ಮನೋಹರ (೧೮) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರ ಮನೋಹರ ಮನೆಯೊಳಗೆ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಚಿಂತಾಜನಕ ಸ್ಥಿತಿಯಲ್ಲಿ ಈತನನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

Posted in: Crime News