ವಿದ್ಯುತ್ ಕಂಬ ಮುರಿದು ಕಾರು ಪಲ್ಟಿ

Posted on March 25, 2011

0ಕಾರ್ಕಳ: ಪಡುಬಿದ್ರಿ ಸಮೀಪದ ಕಾಂಜರಕಟ್ಟೆ ಎಂಬಲ್ಲಿ ವಿದ್ಯುತ್ ಕಂಬವೊಂದನ್ನು ಮುರಿದು ಹಾಕಿದ ಕಾರೊಂದು ಪಲ್ಟಿ ಹೊಡೆದಿರುವುದರಿಂದ ಚಾಲಕ ಕೂದಲೆ ಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಬೋಳ ಗ್ರಾಮದ ನಾರಾಯಣ ಶೆಟ್ಟಿ ಎಂಬವರು ಪಡುಬಿದ್ರಿ ಕಡೆಯಿಂದ ಮನೆಯತ್ತ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಇದರಿಂದ ವಿದ್ಯುತ್ ಕಂಬ ಮುರಿದುಬಿತ್ತು. ಸ್ವಲ್ಪ ಅನತಿಯಲ್ಲಿದ್ದ ಕಂದಕವೊಂದರಲ್ಲಿ ಕಾರು ಪಲ್ಟಿ ಹೊಡೆದಿತ್ತು. ಚಾಲಕನಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ. ಕಾರು ಬಹುತೇಕ ಹಾನಿಗೊಳಗಾಗಿದೆ. ಸ್ಥಳೀಯ ಉದ್ಯಮಿ ಕೆ.ಸಿ. ಕಾಮತ್ ಅವರು ಗಾಯಾಳು ವನ್ನು ಉಪಚರಿಸಿ, ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿದ್ದಾರೆ.

Posted in: Crime News