ದರೋಡೆ ಆರೋಪಿಗೆ ಶಿಕ್ಷೆ

Posted on March 25, 2011

0


ಮಂಗಳೂರು: ದೇರಳಕಟ್ಟೆ ಸಮೀಪದ ಬೆಳ್ಮ ಎಂಬಲ್ಲಿ ೨೦೧೦ರ ಫೆಬ್ರವರಿ ೧೫ರಂದು ಮಯ್ಯದ್ದಿ ಎಂಬವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಹಣ ದೋಚಿದ್ದ ಪ್ರಕರಣದ ಆರೋಪಿಗೆ ನ್ಯಾಯಾಲಯ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕೆ. ಮಯ್ಯದ್ದಿ ಎಂಬವರ ಮೇಲೆ ಸ್ಥಳೀಯ ನಿವಾಸಿ ಮಹಮ್ಮದ್ ಅನ್ಸಾರ್(೨೦) ಎಂಬಾತ ಹಲ್ಲೆ ನಡೆಸಿ ಅವರ ಬಳಿಯಿದ್ದ ೬,೨೦೦ ರೂ. ನಗದು ದೋಚಿ ಪರಾರಿಯಾಗಿದ್ದ. ಮಂಗಳೂರು ಜೆಎಂಎಫ್‌ಸಿ ಮೂರನೇ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಣಿಪಾಲ: ಕಳ್ಳತನ : ಮಣಿಪಾಲ ಸಮೀಪದ ವೆಸ್ಟರ್ನ್ ಕಂಟ್ರಿ ಕ್ಲಬ್ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಂದಾಜು ೧೨,೬೦೦ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾಗಿ ಮಣಿಪಾಲ ಠಾಣೆಗೆ ದೂರು ನೀಡಲಾಗಿದೆ. ಮನೆಯ ಮಾಲಕ ಹರಿಕೃಷ್ಣನ್ ಈ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

Posted in: Crime News