ಕುಖ್ಯಾತ ಕಳ್ಳನ ಸಹಚರನ ಬಂಧನ

Posted on March 25, 2011

0


ಉಡುಪಿ: ಇಲ್ಲಿನ ಪ್ರದೇಶದಾ ದ್ಯಂತ ಲಾಡ್ಜ್‌ನಲ್ಲಿ ತಂಗಿಕೊಂಡು ಕಳ್ಳತನ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಗರಾಜು ಬಂಧಿತನಾದ ಬೆನ್ನಿಗೇ ಪರಾರಿಯಾಗಿದ್ದ ಆತನ ಸಹಚರ ಕಾಸರಗೋಡಿನ ಮಣಿಮುತ್ತು ಕುಮಾರ್(೫೫)ನನ್ನು ಕೋಟ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಕಾಸರಗೋಡಿನ ಬ್ಯಾಂಕ್ ರಸ್ತೆಯಲ್ಲಿ ಅಲೆದಾಡುತ್ತಿದ್ದ ಈತನನ್ನು ಕೋಟ ಠಾಣಾಧಿಕಾರಿ ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಈತನಿಂದ ೨೯೦ ಗ್ರಾಂ ಚಿನ್ನ , ನಾಲ್ಕು ಕೆ.ಜಿ ಬೆಳ್ಳಿ ಆಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಇಬ್ಬರಿಂದಲೂ ಈವರೆಗೆ ೧೯ ಲಕ್ಷ ಮೊತ್ತದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

Posted in: Crime News