ಕಾರ್ಕಳ: ವುಡ್ ಇಂಡಸ್ಟ್ರೀಸ್‌ಗೆ ಬೆಂಕಿ

Posted on March 25, 2011

0


ಕಾರ್ಕಳ: ನಗರದ ಪತ್ತೊಂಜಿಕಟ್ಟೆ ಎಂಬಲ್ಲಿ ವುಡ್ ಇಂಡಸ್ಟ್ರೀಸ್‌ಗೆ ನಿನ್ನೆ ನಸುಕಿನ ಜಾವದಲ್ಲಿ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಗುರುವಾರ ನಸುಕಿನ ಜಾವ ಸುಮಾರು ೪ರ ವೇಳೆಗೆ ಪತ್ತೊಂಜಿಕಟ್ಟೆ ಯಲ್ಲಿರುವ ನಿತ್ಯಾನಂದ ವುಡ್ ಇಂಡಸ್ಟ್ರೀಸ್‌ಗೆ ಬೆಂಕಿ ತಗಲಿಕೊಂಡಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಠಾಣಾಧಿಕಾರಿ ನವೀನ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ ದ್ದರು. ಎರಡು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಸಕ್ರಿಯರಾಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

Posted in: Udupi District