ಸಂಶಯದ ಸುಳಿಯಲ್ಲಿ ನವವಿವಾಹಿತೆಯ ಮೃತ್ಯು

Posted on March 25, 2011

0ಮಂಗಳೂರು: ಮದುವೆಯ ಬಳಿಕ ಇನ್ನೂ ದಾಂಪತ್ಯದ ಸವಿ ಯನ್ನು ಅನುಭವಿಸುವ ಮುನ್ನವೇ ಆಕೆ ಗಂಡನ ಮನೆಯಲ್ಲಿ ಸಾವಿ ಗೀಡಾಗಿದ್ದಾಳೆ. ಆದರೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುವ ಮೂಲಕ ಸಾವಿನ ಹಿಂದೆ ಸಂಶಯ ಕಾಡತೊಡಗಿದೆ. ಕಂಕನಾಡಿ ಠಾಣಾ ವ್ಯಾಪ್ತಿಗೊಳಪಟ್ಟ ಪೊಳಲಿ ಕಲ್ಕೊಟ್ಟೆ ನಿವಾಸಿ ಶ್ರೀಧರ್ ಎಂಬವರ ಪುತ್ರಿ ನಳಿನಿ ಎಂಬಾಕೆಯನ್ನು ಮೂಡಜೆಪ್ಪು ನಿವಾಸಿ ಮೋನಪ್ಪ ಪೂಜಾರಿ ಎಂಬವರ ಮಗ ಪುರುಷೋತ್ತಮ ಎಂಬಾತನಿಗೆ ಕಳೆದ ತಿಂಗಳು ೨೭ರಂದು ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿಯೇ ಇದ್ದ ನಳಿನಿ ಮೊನ್ನೆ ಮಧ್ಯಾಹ್ನ ನೆರೆಮನೆಗೆ ಹೋಗಿ ಪಾಯಸ ಕುಡಿದು ಬಂದು ಬಳಿಕ ಮನೆಯಲ್ಲಿ ಊಟಕ್ಕೆ ಕುಳಿತಾಗ ಅಲ್ಲೇ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಗಂಡನ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿ ನಳಿನಿ ಮನೆಯವರಲ್ಲಿ ಹಾರ್ಟ್ ಅಟ್ಯಾಕ್ ಆಗಿದೆ ಎಂದು ತಿಳಿಸಿದ್ದಾರೆ. ಆದರೆ ಆಸ್ಪತ್ರೆಗೆ ಬರುವುದು ಬೇಡ ಎಂದೂ ಹೇಳಿದ್ದಾರೆ ಎಂದು ನಳಿನಿಯ ಮಾವ ಸತೀಶ್ ತಿಳಿಸಿದ್ದಾರೆ.
ಮರುದಿನ ನಳಿನಿ ಹೃದಯ ವೈಫಲ್ಯದಿಂದ ಮೃತಪಟ್ಟಿದ್ದಾಳೆ ಎಂದು ಆಕೆಯ ಗಂಡನ ಮನೆಯವರು ಮತ್ತು ವೈದ್ಯರು ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವರದಿ ನೀಡಿಲ್ಲ ಎಂದು ದೂರಿರುವ ಸತೀಶ್ ಇದೊಂದು ಕೊಲೆ ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ. ನಳಿನಿಗೆ ಸಣ್ಣ ಪ್ರಾಯದಲ್ಲಿ ಹೃದಯ ಸಂಬಂಧಿ ಕಾಯಿಲೆ ಇದ್ದರೂ ನಂತರ ಗುಣವಾಗಿದ್ದು ಯಾವುದೇ ಮದ್ದು ಇರಲಿಲ್ಲ ಎಂದು ಸತೀಶ್ ತಿಳಿಸಿದ್ದಾರೆ. ನಳಿನಿಯ ಮದುವೆಯ ವೇಳೆ ೬೫ ಸಾವಿರ ನಗದು ಮತ್ತು ಎಂಟು ಪವನ್ ಬಂಗಾರ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೂ ಆಕೆಯ ಅತ್ತೆ ವಧುವಿಗೆ ವಸ್ತ್ರ, ಒಡವೆಗಳನ್ನು ತೆಗೆಯುವಾಗಲೇ ತಗಾದೆ ಎತ್ತಿದ್ದರು. ಬಳಿಕವೂ ಕಿರುಕುಳ ನೀಡುತ್ತಲೇ ಬಂದಿದ್ದರು ಎನ್ನುವುದನ್ನು ನಳಿನಿ ತಿಳಿಸಿದ್ದಳು. ಆಕೆ ಮೃತಪಟ್ಟ ವಿಷಯ ತಿಳಿದ ಬಳಿಕ ನಾವು ಅವರಲ್ಲಿ ವಿಚಾರಿಸಿದಾಗ ನಳಿನಿಯ ಬಾವ ಮತ್ತಿತರರು ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದು ಅದನ್ನು ಕಂಕನಾಡಿ ಠಾಣೆಯಲ್ಲಿ ಇತ್ಯರ್ಥಪಡಿಸಲಾಗಿತ್ತು. ಇದೆಲ್ಲವನ್ನೂ ಗಮನಿಸಿದಾಗ ನಳಿನಿಯದ್ದು ಹೃದಯ ವೈಫಲ್ಯದ ಸಾವಾಗಿರದೆ ಆಕೆಗೆ ವಿಷ ನೀಡಿ ಕೊಲೆ ಮಾಡಲಾಗಿದೆ ಎಂದು ಸತೀಶ್ ಅವರು ಅನುಮಾನ ವ್ಯಕ್ತಪಡಿಸುವ ಮೂಲಕ ಸಾವಿನ ಹಿಂದೆ ಸಂಶಯ ಕಾಡತೊಡಗಿದೆ. ಮದುವೆಯ ವೇಳೆ ೬೫ ಸಾವಿರ ನಗದು ಮತ್ತು ಎಂಟು ಪವನ್ ಬಂಗಾರ ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೂ ಆಕೆಯ ಅತ್ತೆ ವಧುವಿಗೆ ವಸ್ತ್ರ, ಒಡವೆಗಳನ್ನು ತೆಗೆಯುವಾಗಲೇ ತಗಾದೆ ಎತ್ತಿದ್ದರು. ಬಳಿಕವೂ ಕಿರುಕುಳ ನೀಡುತ್ತಲೇ ಬಂದಿದ್ದರು ಎನ್ನುವುದನ್ನು ನಳಿನಿ ತಿಳಿಸಿದ್ದಳು. ಆಕೆ ಮೃತಪಟ್ಟ ವಿಷಯ ತಿಳಿದ ಬಳಿಕ ನಾವು ಅವರಲ್ಲಿ ವಿಚಾರಿಸಿದಾಗ ನಳಿನಿಯ ಬಾವ ಮತ್ತಿತರರು ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದು ಅದನ್ನು ಕಂಕನಾಡಿ ಠಾಣೆಯಲ್ಲಿ ಇತ್ಯರ್ಥಪಡಿಸಲಾಗಿತ್ತು. ಇದೆಲ್ಲವನ್ನೂ ಗಮನಿಸಿದಾಗ ನಳಿನಿಯದ್ದು ಹೃದಯ ವೈಫಲ್ಯದ ಸಾವಾಗಿರದೆ ಆಕೆಗೆ ವಿಷ ನೀಡಿ ಕೊಲೆ ಮಾಡಲಾಗಿದೆ ಎಂದು ಸತೀಶ್ ಅವರು ಅನುಮಾನ ವ್ಯಕ್ತಪಡಿಸುವ ಮೂಲಕ ಸಾವಿನ ಹಿಂದೆ ಸಂಶಯ ಕಾಡತೊಡಗಿದೆ.

Advertisements
Posted in: Crime News