ವಕಾಲತ್ತು ನಿಯಂತ್ರಣ ಕಾಯ್ದೆ ವಿರೋಧಿಸಿ ಪುತ್ತೂರು ವಕೀಲರ ಸಂಘದಿಂದ ಪ್ರತಿಭಟನೆ

Posted on March 25, 2011

0ಪುತ್ತೂರು: ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೊಳಿಸಲು ಉದ್ದೇ ಶಿಸಿರುವ ವಕಾಲತ್ತು ನಿಯಂತ್ರಣ ಕಾಯ್ದೆಯನ್ನು ವಿರೋಧಿಸಿ ಹಾಗೂ ಈ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಬಾರದು ಮತ್ತು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪುತ್ತೂರಿನ ವಕೀಲರು ಗುರು ವಾರ ಕೆಂಪು ಪಟ್ಟಿ ಧರಿಸಿ ಕಲಾಪದಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆ ನಡೆಸಿದರು. ಅಲ್ಲದೆ ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ದರು.
ಪುತ್ತೂರು ವಕೀಲರ ಸಂಘದ ಸಭೆಯು ಅಧ್ಯಕ್ಷರಾದ ಮಹೇಶ್ ಕಜೆ ಅಧ್ಯಕ್ಷತೆಯಲ್ಲಿ ಗುರುವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೇಂದ್ರ ಸರ್ಕಾರದ ಈ ನೂತನ ಕಾಯಿದೆಯನ್ನು ಖಂಡಿಸಲಾಯಿತು. ವಕೀಲರ ಸಂಘದ ಪ್ರಧಾನ ಕಾರ್ಯ ದರ್ಶಿ ಜಗನ್ನಾಥ ರೈ, ಉಪಾಧ್ಯಕ್ಷರಾದ ದೇವಾನಂದ, ಖಜಾಂಚಿ ಅರವಿಂದ ಭಂಡಾರಿ, ಜೊತೆ ಕಾರ್ಯದರ್ಶಿ ಮಮತ ಸುವರ್ಣ, ವಕೀಲರಾದ ಎನ್. ಸುಬ್ರಹ್ಮಣ್ಯಂ, ಎಂ. ದಾಮೋದರ ರಾವ್, ಉದಯಶಂಕರ ಶೆಟ್ಟಿ, ಪಿ.ಕೆ. ಸತೀಶನ್, ಶಂಭು ಭಟ್, ಮತ್ತಿತರರು ಮಾತನಾಡಿ ಕಾಯಿದೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.
ಬಳಿಕ ಮೆರವಣಿಗೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದ ವಕೀಲರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಈ ಕುರಿತಾದ ಮನವಿ ಸ್ವೀಕರಿಸಿದರು. ಗುರುವಾರ ನ್ಯಾಯಾಲಯದ ಬಹುತೇಕ ಕಲಾಪಗಳನ್ನು ಸಂಘದ ಸದಸ್ಯರ ಕೇಳಿಕೆ ಮೇರೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

Advertisements