ಮತಾಂತರ ಆರೋಪಿಗೆ ಜಾಮೀನು

Posted on March 25, 2011

0


ಮಂಗಳೂರು: ಬಾಲಕನ ಮತಾಂತರ ಯತ್ನ ಆರೋಪದ ಮೇಲೆ ಬಂಧಿತನಾಗಿದ್ದ ಉರ್ವಾ-ಶೇಡಿಗುರಿ ನಿವಾಸಿ ಜುಲ್ಲು ಲೋಬೋ ಎಂಬಾತನಿಗೆ ಪ್ರಥಮ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕಂಕನಾಡಿಯ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಎಂಬಾತನನ್ನು ಮನೆಗೆ ಬಿಡುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿಹಾಕಿದ್ದೂ ಅಲ್ಲದೆ, ಕ್ರೈಸ್ತ ಧರ್ಮಕ್ಕೆ ಸೇರುವಂತೆ ಒತ್ತಡ ಹೇರಿದ್ದು ಬಾಲಕನ ಕೈಯಲ್ಲಿದ್ದ ಮೊಬೈಲ್ ಹಾಗೂ ೫೦೦ ರೂ. ನಗದು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜುಲ್ಲು ಲೋಬೋನನ್ನು ಉರ್ವಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯ ಪರ ವಕೀಲ ಐವನ್ ಡಿಸೋಜಾ ವಾದಿಸಿದ್ದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರಿಕ್ಷಾ ಚಾಲಕನಿಗೆ ಹಲ್ಲೆ : ಪಾರ್ಕ್‌ನಲ್ಲಿ ಕ್ಯೂ ನಿಲ್ಲುವ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆದು ಓರ್ವ ಚಾಲಕನ ಮೇಲೆ ಇನ್ನೋರ್ವ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ನಿನ್ನೆ ಸುಳ್ಯದಲ್ಲಿ ನಡೆದಿದೆ.
ಇಮ್ರಾನ್ ಎಂಬಾತ ವಿನ್ಸೆಂಟ್ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ ಎಂದು ಸುಳ್ಯ ಪೊಲೀಸರಿಗೆ ದೂರಲಾಗಿದೆ.

Advertisements
Posted in: Crime News