ತವರಿಗೆ ಬಂದರೂ ತಪ್ಪದ ಪತಿಯ ಹಿಂಸೆ

Posted on March 25, 2011

0


ಮಂಗಳೂರು: ಪತಿಯ ಹಿಂಸೆ ತಾಳಲಾರದೆ ತವರಿಗೆ ಬಂದರೂ ಅಲ್ಲಿಗೂ ಬಂದು ಹಲ್ಲೆ ನಡೆಸುವ ಪತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರು ಕಬಕ ಗ್ರಾಮದ ನೆಹರೂ ನಗರ ಗಣೇಶ್ ಬಾಗ್ ನಿವಾಸಿ ಆಂಜಲಿನ್ ಸುನಿತಾ ಗೊನ್ಸಾಲ್ವಿಸ್ ಎಂಬವರು ತನ್ನ ಪತಿ ಜೋಕಿಂ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾರೆ. ಪಾನಮತ್ತನಾಗಿ ತನಗೆ ದಿನವೂ ಹಿಂಸೆ ನೀಡುತ್ತಿದ್ದುದನ್ನು ಸಹಿಸಲಾಗದೆ ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದರೆ ಅಲ್ಲಿಗೂ ಬಂದು ತನ್ನ ಮೇಲಷ್ಟೇ ಅಲ್ಲ ತನ್ನ ತಾಯಿಯನ್ನೂ ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisements
Posted in: Crime News