ಖಾಝಿ ಸಾವು: ಸಿಬಿಐ ತಂಡ ಕಾಸರಗೋಡಲ್ಲಿ

Posted on March 25, 2011

0ಕಾಸರಗೋಡು: ಮುಸ್ಲಿಂ ಸಮಸ್ತ ವಿಭಾಗದ ಹಿರಿಯ ಮುಂದಾಳು, ಮಂಗಳೂರು ಖಾಝಿ ಅಬ್ದುಲ್ ಮೌಲವಿ ಮರಣದ ತನಿಖೆ ನಡೆಸುತ್ತಿ ರುವ ನವದೆಹಲಿಯ ಸಿಬಿಐ ಕೇಂದ್ರದ ಎಂಟು ಮಂದಿ ತಾಂತ್ರಿಕ ತಜ್ಞರು ಕಾಸರಗೋಡಿಗೆ ಆಗಮಿಸಿದ್ದಾರೆ.
ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ತಂಡ ಕಾಸರಗೋಡಿಗೆ ಆಗಮಿಸಿದ್ದು, ಇಂದು ಖಾಝಿಯವರ ಚೆಂಬರಿಕ್ಕದ ಮನೆಗೆ ಮತ್ತು ಮೃತದೇಹ ಪತ್ತೆಯಾದ ಚೆಂಬರಿಕ್ಕ ಕಡಲ ಕಿನಾ ರೆಗೆ ತೆರಳಿ ಮಾಹಿ ತಿ ಕಲೆ ಹಾಕಲಿದೆ. ಸಮುದ್ರದ ಭರತ-ಇಳಿತವನ್ನು ಪರಿ ಶೋಧಿಸಿ ಡೆಮ್ಕಿ ತಪಾಸಣೆಯನ್ನು ಮಾಡಲಿರುವ ತಂಡ ಈಗಾಗಲೇ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದೆ. ಈಗಾ ಗಲೇ ಮಂಗಳೂರು ಮತ್ತು ಕಾಸರಗೋ ಡಿನ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Advertisements