ಅತ್ಯಾಚಾರಕ್ಕೆ ಯತ್ನಿಸಿದವರ ಸೆರೆ

Posted on March 25, 2011

0


ಬಂಟ್ವಾಳ: ಮಹಿಳೆಯ ಮಾನ ಭಂಗ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ನಿನ್ನೆ ಸಜೀಪ ಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ನಂದಾವರ ನಿವಾಸಿ ಗಳಾದ ಅಬ್ಬುಲ್ ಹಮೀದ್ ಎಂಬವರ ಮಗ ಶೆರೀಫ್ ಯಾನೆ ಬೋಂಗ ಶೆರೀಫ್ ಹಾಗೂ ಇಸ್ಮಾಯಿಲ್ ಎಂಬ ವರ ಮಗ ಇಲ್ಯಾಸ್ ಯಾನೆ ಆನೆ ಇಲ್ಯಾಸ್ ಎಂದು ಗುರುತಿಸಲಾಗಿದೆ. ನಂದಾವರ ಸಮೀಪದ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಮಾನಭಂಗಕ್ಕೆ ಯತ್ನಿಸಿದ ಆರೋಪಿಗಳು ಕಳೆದ ವರ್ಷದಿಂದ ತಲೆಮರೆಸಿಕೊಂಡಿದ್ದು, ಕೇರಳದಲ್ಲಿ ವಾಸವಾಗಿದ್ದರು. ನಿನ್ನೆ ಊರಿಗೆ ಬರುತ್ತಿದ್ದ ವೇಳೆ ಅವರಿಬ್ಬರನ್ನು ನಗರ ಪೋಲಿಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟ, ಕಳ್ಳತನ, ಹಲ್ಲೆ ಇತ್ಯಾದಿ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಗಳ ಮೇಲೆ ಹಲವು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ಆರೋಪಿಗಳಿಗೆ ನ್ಯಾಯಾಲಯಾ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Advertisements
Posted in: Cinema News